ಮನೆ ರಾಜಕೀಯ ಭಾರತವನ್ನು ಅಗ್ರಗಣ್ಯ ರಾಷ್ಟ್ರ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ: ಅಮಿತ್ ಶಾ

ಭಾರತವನ್ನು ಅಗ್ರಗಣ್ಯ ರಾಷ್ಟ್ರ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ: ಅಮಿತ್ ಶಾ

0

ಹುಬ್ಬಳ್ಳಿ: ಭಾರತ ವಿಶ್ವದಲ್ಲಿ ಅಗ್ರಗಣ್ಯ ರಾಷ್ಟ್ರವಾಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.

ಕೆಎಲ್’ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ವೈಯಕ್ತಿಕ ಅಭಿವೃದ್ಧಿ ಜತೆಗೆ ಮಹಾನ್ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕಳೆದ ಎಂಟುವರೆ ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿ, ಬದಲಾವಣೆ ವೇಗ ತೀವ್ರತೆ ಪಡೆದುಕೊಂಡಿದೆ. 2014 ರ ಮೊದಲು ಭಾರತ ಆರ್ಥಿಕವಾಗಿ ವಿಶ್ವದಲ್ಲಿ 12 ನೇ ಸ್ಥಾನದಲ್ಲಿತ್ತು, ಇದೀಗ 5ನೇ ಸ್ಥಾನದಲ್ಲಿದ್ದು, ವಿಶ್ವದ 3ನೇ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಬೇಕೆಂಬುದು ಪ್ರಧಾನಿಯವರ ಕನಸಾಗಿದೆ. ಇದು ಸಾಧ್ಯವಾದರೆ ತಾಂತ್ರಿಕ ಪದವೀಧರರಿಗೆ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಭಾರತವನ್ನು ವಿಶ್ವದಲ್ಲೇ ಉತ್ಪಾದನಾ ಹಬ್ ಆಗಿಸಬೇಕು ಎಂದು ಪ್ರಧಾನಿಯವರು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. 2014 ಮುಂಚೆ ಬೌದ್ಧಿಕ ಆಸ್ತಿ ಹಕ್ಕು (ಪೇಟೆಂಟ್) ನೋಂದಣಿಗೆ ಅರ್ಜಿ ಸಲ್ಲಿಕೆಯಾಗುತ್ತಿದ್ದವು. ಇದೀಗ 1.5 ಲಕ್ಷ ಅರ್ಜಿಗಳು ಬರುತ್ತಿವೆ. ಮುದ್ರಾ ಯೋಜನೆಯಡಿ ಸುಮಾರು 4.30 ಕೋಟಿ ಫಲಾನುಭವಿಗಳಿಗೆ 2 ಲಕ್ಷ ಕೋಟಿ ರೂ.ನಷ್ಟು ಸಾಲ ನೀಡಲಾಗಿದೆ ಎಂದರು.

ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ಕೃತಕ ಬುದ್ದಿಮತ್ತೆ(ಎಐ), ಸೆಮಿಕಂಡೆಕ್ಟರ್, ಔಷಧ ಉತ್ಪಾದನಾ ಕ್ಷೇತ್ರ, ಗ್ರೀನ್ ಎನರ್ಜಿ, ಐಐಟಿ, ಐಐಎಂ, ವೈದ್ಯಕೀಯ ಕಾಲೇಜು ಗಳ ಹೆಚ್ಚಳದೊಂದಿಗೆ ದೇಶ ಸರ್ವತೋಮುಖ ಅಭಿವೃದ್ಧಿಯತ್ತ ಸಾಗುತ್ತಿದೆ.