ಮೈಸೂರು: ರೋಟರಿ ಮೈಸೂರಿನಿಂದ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣೆ ಮಾಡಲಾಯಿತು.
ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃತಕ ಕಾಲು ವಿತರಿಸಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ಗೌಡ ಅವರು, ನಾನಾ ಕಾರಣದಿಂದ ಕಾಲು ಕಳೆದುಕೊಂಡವರಿಗೆ ಜೀವನನ್ನು ಸಹಜವಾಗಿ ಸಾಗಿಸಲು ಕೃತಕ ಕಾಲು ನೆರವಾಗುತ್ತದೆ ಎಂದು ಹೇಳಿದರು.
ಮೈಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಕುಶಾಲನಗರ ಸೇರಿದಂತೆ ವಿವಿಧೆಡೆಯ 14 ವಿಕಲಚೇತನರಿಗೆ ಕೃತಕ ಮೊಣಕಾಲು, ಮೊಣ ಕೈ ವಿತರಿಸಲಾಯಿತು. ರೋಟರಿ ಮೈಸೂರು ಅಧ್ಯಕ್ಷ ಅರುಣ್ ಬೆಳವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಎಂಎಎಲ್ಸಿ ಅಧ್ಯಕ್ಷ ಡಿ.ರವಿಶಂಕರ್, ಗೌರವ ಕಾರ್ಯದರ್ಶಿ ಮಹೇಂದ್ರಸಿಂಗ್ ಇತರರು ಇದ್ದರು.