ಬೆಂಗಳೂರು: ಬಿಯರ್ ಬಾಟಲ್ ನಿಂದ ಹೊಡೆದು ರೌಡಿಶೀಟರ್ ಶಿವರಾಜ್ ಎಂಬಾತನನ್ನು ಕೊಲೆ ಮಾಡಿರುವ ಘಟನೆ ನಗರದ ಉತ್ತರಹಳ್ಳಿಯ ಸ್ಪೈಸ್ ಬಾರ್ ನಲ್ಲಿ ನಡೆದಿದೆ.
Join Our Whatsapp Group
ಭಾನುವಾರ ರಾತ್ರಿ(ಏ.9) ರಾತ್ರಿ ಕಂಠಪೂರ್ತಿ ಎಣ್ಣೆ ಕುಡಿದು ಇಬ್ಬರು ರೌಡಿಶೀಟರ್’ಗಳಾದ ಮಂಜ ಅಲಿಯಾಸ್ ಪೋಲಾರ್ ಹಾಗೂ ಶಿವರಾಜ್ ನಡುವೆ ಗಲಾಟೆಯಾಗಿದ್ದು, ರೌಡಿಶೀಟರ್ ಮಂಜ ಎಂಬುವವನು ಬಿಯರ್ ಬಾಟಲ್ ನಿಂದ ಶಿವರಾಜ್ ತಲೆಗೆ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಬಳಿಕ ಶಿವರಾಜ್ ನನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದು, ಈ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ಶಿವರಾಜ್ ಸಿಕೆ ಅಚ್ಚುಕಟ್ಟು ಠಾಣೆಯ ರೌಡಿಶೀಟರ್ ಆಗಿದ್ದು, ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಆತನನ್ನು ಬಿಯರ್ ಬಾಟಲ್ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮಂಜು ಸೇರಿದಂತೆ ಮೂರು ಜನ ಆರೋಪಿಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದೇವೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.