ದಕ್ಷಿಣ ಕನ್ನಡ: ಮಂಗಳೂರು ಹೊರವಲಯದ ಪರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ರೌಡಿ ಶೀಟರ್ ಪವನ್ ಎಂಬಾತನಿಗೆ ರೌಡಿಶೀಟರ್ ಚರಣ್ ಎಂಬಾತ ಚೂರಿ ಇರಿದ ಘಟನೆ ನಡೆದಿದೆ.
ಎಸ್ ಡಿಪಿಐ ಮುಖಂಡ ಕಲಾಯಿ ಅಶ್ರಫ್ ಕೊಲೆ ಪ್ರಕರಣದ ಆರೋಪಿಯಾಗಿರುವ ಪವನ್ ಗೆ ಗಾಂಜಾ ವ್ಯಸನಿಯಾಗಿರುವ ಆರೋಪಿ ಚರಣ್ ಚಾಕು ಇರಿದಿದ್ದಾನೆ. ಕೂಡಲೇ ಪವನ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಗಾಯಾಳು ಪವನ್ ಪಾರಾಗಿದ್ದಾನೆ. ಮೇಲ್ನೋಟಕ್ಕೆ ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.