ಮನೆ ರಾಜ್ಯ ಯೋಗ ದಿನಾಚರಣೆಗೆ ರಾಜವಂಶಸ್ಥರಿಗೆ ಆಹ್ವಾನ: ಪ್ರತಾಪ್ ಸಿಂಹ

ಯೋಗ ದಿನಾಚರಣೆಗೆ ರಾಜವಂಶಸ್ಥರಿಗೆ ಆಹ್ವಾನ: ಪ್ರತಾಪ್ ಸಿಂಹ

0

ಮೈಸೂರು(Mysuru): ಮೈಸೂರು ಅರಮನೆ ಆವರಣದಲ್ಲಿ ಜೂನ್ 21ರಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ರಾಜವಂಶಸ್ಥರಿಗೆ ಆಹ್ವಾನ ನೀಡಲಾಗಿದೆ ಎಂದು ಸಂಸದ ಪ್ರತಾಪ‌ ಸಿಂಹ ತಿಳಿಸಿದರು.

ವೇದಿಕೆಯಲ್ಲಿ ರಾಜ ಮನೆತನದವರಿಗೆ ಅವಕಾಶ ಇರಲಿದೆ. ನಂತರ ಪ್ರಮೋದದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ಪ್ರಧಾನಿಯು ಉಪಾಹಾರ ಸೇವಿಸಲು ಅವರ ನಿವಾಸಕ್ಕೆ ತೆರಳಲಿದ್ದಾರೆ ಎಂದರು.

ರಾಜ ಮನೆತನದವರು ಕಟ್ಟಿದ ಅರಮನೆ ಆವರಣದಲ್ಲಿ ಯೋಗ ಕಾರ್ಯಕ್ರಮ ನಡೆಯುತ್ತಿದೆ. ಅವರಿಗೆ ಗೌರವ ನೀಡುವ ಕೆಲಸ ಮಾಡುತ್ತೇವೆ.

ಎಂದಿಗೂ ಅವರನ್ನು ಕಡೆಗಣಿಸಿಲ್ಲ ಎಂದು ಹೇಳಿದರು.

ಮೋದಿ ಭೇಟಿ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಚಾಮುಂಡಿ ಬೆಟ್ಟದ ರಸ್ತೆ ಮಾರ್ಗದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಆ ಬೀದಿ ದೀಪ ವ್ಯವಸ್ಥೆ ಶಾಶ್ವತವಾಗಿ ಇರಲಿದೆ. ಬೆಟ್ಟದ ಪ್ರಾಣಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಅವಶ್ಯಕತೆ ಇದ್ದಾಗ ಮಾತ್ರ ಬೀದಿ ದೀಪ ಬಳಕೆ ಮಾಡಲಾಗುವುದು. ಚಾಮುಂಡಿಬೆಟ್ಟವನ್ನು ಸಸ್ಯಕಾಶಿ ಮಾಡಲಾಗುವುದು ಎಂದು ಹೇಳಿದರು.

ಯೋಗ ದಿನದ ಕಾರ್ಯಕ್ರಮದ ವೇದಿಕೆಯಲ್ಲಿ ರಾಜವಂಶಸ್ಥರಿಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿಬಂದಿತ್ತು.

ಹಿಂದಿನ ಲೇಖನಆಸ್ತಿ ವಿವಾದ: ಜಡ್ಜ್ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಮುಂದಿನ ಲೇಖನಪರಿಷತ್ ಚುನಾವಣೆಯಲ್ಲಿ ಸೋಲು: ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್‌ ಸಿಂಹ ವಿರುದ್ದ ಹೈಕಮಾಂಡ್‌ ಗೆ ದೂರು