ಮನೆ ಕಾನೂನು ಚಾರ್‍ ಧಾಮ್ ಯೋಜನೆ ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿ ನ್ಯಾ.ಎ.ಕೆ.ಸಿಕ್ರಿ ನೇಮಕ

ಚಾರ್‍ ಧಾಮ್ ಯೋಜನೆ ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿ ನ್ಯಾ.ಎ.ಕೆ.ಸಿಕ್ರಿ ನೇಮಕ

0

ನವದೆಹಲಿ: ಹಿಮಾಲಯ ಕಣಿವೆಯುದ್ದಕ್ಕೂ ಚಾರ್‌ಧಾಮ್‌ ಯೋಜನೆಯಿಂದ ಆಗಬಹುದಾದ ಸಂಚಿತ ಪರಿಣಾಮವನ್ನು ಅಂದಾಜಿಸುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅವರನ್ನು ಸುಪ್ರೀಂ ಕೋರ್ಟ್‌ ನೇಮಕ ಮಾಡಿದೆ.

ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ರವಿ ಚೋಪ್ರಾ ಅವರು ನೀಡಿದ್ದ ರಾಜೀನಾಮೆಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠವು ಇದೇ ಸಂದರ್ಭದಲ್ಲಿ ಅಂಗೀಕರಿಸಿತು. ಚೋಪ್ರಾ ಜನವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್‌ ಅವರು, ‘ಸುಪ್ರೀಂ ಕೋರ್ಟ್‌ ಈಗಾಗಲೇ ಸಿಕ್ರಿ ಅವರನ್ನು ಯೋಜನೆಗೆ ಕುರಿತಾದ ಪರಿಸರ ಸಂಬಂಧಿತ ವಿಷಯಗಳ ಗಮನಿಸುವ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾಗಿ ನೇಮಿಸಿದೆ. ಅವರನ್ನೇ ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿಯೂ ನೇಮಿಸಬಹುದು’ ಎಂದು ತಿಳಿಸಿದರು. ಪೀಠ ಈ ಸಲಹೆಯನ್ನು ಒಪ್ಪಿಕೊಂಡಿತು.