ಮನೆ ರಾಜ್ಯ ಆರ್‌ಟಿಐ ನಿರ್ಲಕ್ಷ್ಯ; ಮಂಡ್ಯದ ಮಾಜಿ ಎಸ್‌ಪಿ ಹಾಗೂ ಮಳವಳ್ಳಿ ಡಿವೈಎಸ್‌ಪಿಗೆ ಸಂಕಷ್ಟ..!

ಆರ್‌ಟಿಐ ನಿರ್ಲಕ್ಷ್ಯ; ಮಂಡ್ಯದ ಮಾಜಿ ಎಸ್‌ಪಿ ಹಾಗೂ ಮಳವಳ್ಳಿ ಡಿವೈಎಸ್‌ಪಿಗೆ ಸಂಕಷ್ಟ..!

0

ಮಂಡ್ಯ : ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳಿದ ಮಾಹಿತಿಯನ್ನು ನೀಡದೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಈಗ ಇಲಾಖಾ ತನಿಖೆ ಹಾಗೂ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ. ​ಮಳವಳ್ಳಿಯ ನಾಗರಾಜು ಎಂಬುವವರು 2022ರಲ್ಲಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.

ಆದರೆ, ಅಂದಿನ ಮಳವಳ್ಳಿ ಡಿವೈಎಸ್‌ಪಿ ನವೀನ್ ಕುಮಾರ್ ಅರ್ಜಿಯನ್ನು ವರ್ಗಾಯಿಸದೆ, ಮಾಹಿತಿಯನ್ನು ನೀಡಲು ಬರುವುದಿಲ್ಲ ಎಂದು ಹಿಂಬರಹ ನೀಡಿದ್ದರು. ​ಇದರ ವಿರುದ್ಧ ಮಂಡ್ಯದ ಅಂದಿನ ಎಸ್‌ಪಿ ಎನ್. ಯತೀಶ್ ಅವರಿಗೆ ಮೇಲ್ಮನವಿ ಸಲ್ಲಿಸಿದರೂ, ಅವರು ಯಾವುದೇ ವಿಚಾರಣೆ ನಡೆಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು.

ಈ ಬಗ್ಗೆ ಎರಡನೇ ಮೇಲ್ಮನವಿ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಇಬ್ಬರೂ ಅಧಿಕಾರಿಗಳ (ಎನ್. ಯತೀಶ್ ಮತ್ತು ನವೀನ್ ಕುಮಾರ್) ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಶಿಸ್ತುಕ್ರಮ ಜರುಗಿಸುವಂತೆ ಡಿಜಿಪಿ ಸಲೀಂ ಅವರಿಗೆ ಸೂಚನೆ ನೀಡಿದ್ದಾರೆ. ​ಆರ್‌ಟಿಐ ಅರ್ಜಿಗಳನ್ನು ಲಘುವಾಗಿ ಪರಿಗಣಿಸುವ, ಸಾರ್ವಜನಿಕರನ್ನು ಅಲೆದಾಡಿಸುವ ಸರಕಾರಿ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.