ಕ್ರೋದಾಗ್ನಿಯಾದ ಬ್ರಹ್ಮದೇವನ ಗಲಾಟೆಯಿಂದ ಆ ಕ್ಷಣದಲ್ಲಿಯೇ ದುರ್ನಿರೀಕ್ಷ ತೇಜಾದೊಂದಿಗೆ ನಿಟಲಾಕ್ಷನು, ಅರ್ಧನಾರೀ ಸಮೇತನಾದ ರುದ್ರನು ಅವಿರ್ಭವಿಸಿದನು. ನಂತರ ರುದ್ರಾಕೃತಿಯುಳ್ಳ ಮಹಾತ್ಮನು, ಮತಿಮಂತನು, ಭಿಷಣನೋ, ಭಯಂಕರನೂ, ಋತಧ್ವಜನೂ, ಪಿಂಗಾಳಾಕ್ಷನೂ, ರುಚಿ, ಶುಚಿ, ಕಾಲಾಗ್ನಿ ಎಂಬ ಹತ್ತು ರುದ್ರರು ಜನಿಸಿದರು. ಇವರೇ ಏಕಾದಶ ರುದ್ರರು.
ಆನಂತರ ಪದ್ಮೋಧವನು, ಸರ್ವಾತ್ಮನು, ತನ್ನೊಂದಿಗೆ ಸಮಾನನಾದ ಸ್ವಯಂಭೂ, ಮನು ವನ್ನು ಸೃಷ್ಟಿಸಿದನು. ಆ ಮನು ತಪೋಧಾನಳಾದ ಶತರೂಪವನ್ನು ವಿವಾಹವಾಗಿ ಧರ್ಮ ಪ್ರವರ್ತನೆ ನಾಗಿ ಮನ್ಮಂತರ ಪರ್ಯಂತವು ರಾಜ್ಯ ಭೋಗಗಳನ್ನು ಅನುಭವಿಸಿದನು ಆ ಪುಣ್ಯ ದಂಪತಿಗಳಿಗೆ ಪ್ರಿಯವ್ರತನು, ಉತ್ಥಾನಪಾದನು, ಪ್ರಸೂತಿ, ಆಕೂತಿಯೆಂಬ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಅವರಲ್ಲಿ ಪ್ರಸೂತಿಯನ್ನು ದಕ್ಷಯನ್ನು ಪ್ರೀತಿಸಿ ವಿವಾಹವಾದನು. ಆಕೂತಿಯನ್ನು ರುಚಿಕನು ಸ್ವೀಕರಿಸಿದನು. ಅಕೂತಿ ರುಚಿಕರಿಗೆ ಯಜ್ಙನು, ಆತನಿಗೆ ರಕ್ಷಿಣೆಯ ಗರ್ಭದಲ್ಲಿ 12 ಯಾಮಾರು ಉದಯಿಸಿದನು. ಸ್ವಯಂಭು ಮನುವಿನ ಕಾಲದಲ್ಲಿ ಇವರು ದೇವಗಣರಾಗಿ ಸ್ವರ್ಗ ಪದವಿಯನ್ನು ಪಡೆದರು.
ಸಕಲ ವಿದ್ಯಾ ದಕ್ಷನಿಗೆ ಪ್ರಸೂತಿಯ ಗರ್ಭದಿಂದ 40 ಪುತ್ರಿಯರು ಜನಿಸಿದರು. ಅವರಲ್ಲಿ ಶ್ರದ್ಧಾ, ಲಕ್ಷ್ಮಿ, ಧೃತಿ, ತುಷ್ಟಿ, ಪುಷ್ಠಿ, ಮೇದ, ಕ್ರಿಯಾ, ಬುದ್ಧಿ, ಲಜ್ಜಾ, ವಪು, ಶಾಂತಿ, ಸಿದ್ದಿ, ಕೀರ್ತಿ, ಎಂಬ 13 ಕನ್ಯೆಯರು ಧರ್ಮನು ವಿವಾಹವಾದನು. ಇನ್ನುಳಿದ ಕನ್ಯೆಯರಲ್ಲಿ ಖ್ಯಾತಿಯನ್ನು ಬೃಗು, ಸತಿದೇವಿಯನ್ನು ಭವನು, ಸಂಭೂತಿಯನ್ನು ಮರೀಚಿ, ಸ್ಮೃತಿಯನ್ನು ಅಂಗೀರಸನು, ಪ್ರೀತಿಯನ್ನು ಪುಲಸ್ತ್ಯನು, ಕ್ಷಮಾಳಲನ್ನು ಪುನಹನು, ಸನ್ನತಿಯನ್ನು ಕ್ರತು, ಅನಸೂಯಳನ್ನು ಅತ್ರಿ, ಉರ್ಜಳನ್ನು ವಶಿಷ್ಠನು, ಸ್ವಹಾಳನ್ನು ವಹ್ನೀ, ಸ್ವದಳನ್ನು ಪಿತೃದೇವನು ವಿವಾಹವಾದನು.
ಅಷ್ಟಾದರೂ ಬ್ರಹ್ಮದೇವನಿಗೆ ಸಂತೋಷವಾಗಲಿಲ್ಲ. ತನ್ನೊಂದಿಗೆ ಸಮಾನದ ಶಕ್ತಿವಂತನಾದ ಸುತನನ್ನು ಪಡೆಯಲಿಲ್ಲವೆಂದು ಚಿಂತಿಸುತ್ತಿರಲು ಸಂಕಲ್ಪದಿಂದಲೇ ಆತನ ತೊಡೆಯ ಭಾಗದಿಂದ ಒಬ್ಬ ಮಗನು ಉದ್ಭವಿಸಿದನು ಆ ಶಿಸು ಉದಯಿಸಿದ ಮರುಕ್ಷಣದಲ್ಲಿಯೇ ತನಗೆ ನಾಮಕರಣ ಮಾಡುವಂತೆ ಕೋರಿರೋಧಿಸಿ ಬಲವಂತ ಪಡಿಸಿದನು…. ಆರೋಧಕ ಧ್ವನಿಯಿಂದ ಬ್ರಹ್ಮದೇವನ ಅವನಿಗೆ ರುದ್ರನೆಂದು ಹೆಸರಿನ್ನಿಟ್ಟನು. ಅವನು ಇನ್ನು 7 ಬಾರಿರೋಧಿಸಲು ಬ್ರಹ್ಮನು ಅವನನ್ನು ಲಾಲನೆ ಮಾಡಿ ಭವನು, ಶರವನು, ಮಹೇಶ್ವರನು, ಪಶುಪತಿ, ಭೀಮ, ಉಗ್ರ, ಮಹಾದೇವ ಎಂಬ ನಾಮದೇವಗಳನ್ನು ಇಟ್ಟು ಎಂಟು ಹೆಸರುಗಳಿಂದ ರಾರಾಜಿಸುತ್ತಿದ್ದಾನೆ. ಸೂರ್ಯನು, ಚಂದ್ರನು, ಪೃಥ್ವಿ, ಜಲ, ಆಗ್ನಿ, ವಾಯು, ಆಕಾಶ ಯಜಮಾನರನ್ನು ಶರೀರವನ್ನಾಗಿ ಹೊಂದಿಸಿ ರುದ್ರನನ್ನು ಅಷ್ಟಮೂರ್ತಿಯನ್ನಾಗಿ ರೂಪಿಸಿದನು. ಸೂರ್ಯನಿಗೆ ಸುವರ್ಚಲ, ಚಂದ್ರನಿಗೆ ರೋಹಿಣಿ, ಜಲರಾಶಿಗೆ ಉಷ, ಅಗ್ನಿಗೆ ಸ್ವಾಹ, ವಾಯುವಿಗೆ ಶಿವ, ಆಕಾಶಕ್ಕೆ ದಿಕ್ಕು, ಯಜಮಾನನಿಗೆ ದೀಕ್ಷೆ ಪತ್ನಿಯರಾದರು.
ಹಿಮಮಂತನಿಗೆ ಮನಕೆಯ ಗರ್ಭದಿಂದ ಆದಿಶಕ್ತಿ ಗೌರಿಯು ಹುಟ್ಟಿದಳು ಆಕೆ ರುದ್ರನಿಗೆ ಸತಿಯಾದಳು. ದಕ್ಷಪುತ್ರ ಖ್ಯಾತಿಯನ್ನು ಬೃಗು ಧರ್ಮ ಪತ್ನಿಯಾಗಿ ಮಾಡಿಕೊಂಡು ಧಾತ, ವಿಧಾತ ಲಕ್ಷ್ಮೀಯರನ್ನು ಸಂತಾನವನ್ನಾಗಿ ಪಡೆದು, ಲಕ್ಷ್ಮಿಯನ್ನು ಶ್ರೀಹರಿಗೆ ಕೊಟ್ಟು ಕಲ್ಯಾಣ ಮಾಡಿದನು.