ಮನೆ ಅಂತಾರಾಷ್ಟ್ರೀಯ ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ: 17 ಮಂದಿ ಸಾವು- ನೆರವಿಗೆ ಮನವಿ

ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ: 17 ಮಂದಿ ಸಾವು- ನೆರವಿಗೆ ಮನವಿ

0

ಕೈವ್:‌ ರಷ್ಯಾ ಉಕ್ರೇನ್‌ ನಡುವಿನ ದೀರ್ಘಕಾಲದ ಯುದ್ಧ ಮುಂದುವರಿದಿದ್ದು, ಬುಧವಾರ (ಏ.18) ಉಕ್ರೇನ್‌ ಮೇಲೆ ನಡೆಸಿದ ಮಿಸೈಲ್‌ ದಾಳಿಯಲ್ಲಿ 17 ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

Join Our Whatsapp Group

ಮಿಸೈಲ್‌ ದಾಳಿಯಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ದ ನ್ಯೂಯಾರ್ಕ್‌ ಟೈಮ್ಸ್‌ ತಿಳಿಸಿದ್ದು, ತಮ್ಮಲ್ಲಿ ವೈಮಾನಿಕ ದಾಳಿಯ ವ್ಯವಸ್ಥೆಯಲ್ಲಿನ ಕೊರತೆಯಿಂದಾಗಿ ಈ ದುರಂತ ನಡೆದಿರುವುದಾಗಿ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದಾರೆ.

ರಷ್ಯಾದ ದಾಳಿಯನ್ನು ಎದುರಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲದ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಒಂದು ವೇಳೆ ನಮ್ಮ ಬಳಿ ವೈಮಾನಿಕ ಯುದ್ಧ ಶಸ್ತ್ರಾಸ್ತ್ರಗಳು ಇದ್ದಿದ್ದರೂ ಕೂಡಾ ನಮಗೆ ಹೆಚ್ಚಿನ ಅನುಕೂಲವಾಗುತ್ತಿರಲಿಲ್ಲ. ಜಾಗತಿಕವಾಗಿ ರಷ್ಯಾದ ಮೇಲೆ ಒತ್ತಡ ಹೇರುವುದು ತುರ್ತು ಅಗತ್ಯವಾಗಿದೆ ಎಂದು ಝೆಲೆನ್ಸ್ಕಿ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಜನನಿಬಿಡವಾದ ಯೂನಿರ್ವಸಿಟಿ, ಆಸ್ಪತ್ರೆಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ಮಿಸೈಲ್‌ ದಾಳಿ ನಡೆಸಿದ್ದು, ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ವರದಿ ಹೇಳಿದೆ.

ರಕ್ತಸಿಕ್ತವಾದ ಶವಗಳು ಬೀದಿಯಲ್ಲಿ ಬಿದ್ದಿರುವುದು, ರಕ್ತಲೇಪಿತ ವಾಹನಗಳು ಎಲ್ಲೆಡೆ ಓಡಾಡುತ್ತಿರುವುದಾಗಿ ಚೆರ್ನಿಹಿವ್‌ ನಗರದ ಅಧಿಕಾರಿ ಓಲೆಕ್ಸಾಂಡರ್‌ ಲೋಮಾಕೊ ಘಟನೆಯ ಭೀಕರತೆಯ ಬಗ್ಗೆ ತಿಳಿಸಿದ್ದಾರೆ.