ಬೆಂಗಳೂರು : ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವೀಂದ್ರ ಕಲಾಮಂದಿರದಲ್ಲಿಂದು ಎಸ್.ಎಸ್ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಜೆಪಿಯವರು ಹೇಳಿದರು, ಎಂದು ಭೈರಪ್ಪ ಅವರ ಸ್ಮಾರಕ ಮಾಡಲ್ಲ. ಮೈಸೂರನಲ್ಲೇ ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದದ್ದರಿಂದ ಅಲ್ಲೇ ಸ್ಮಾರಕ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಭೈರಪ್ಪ ಅವ್ರು ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. ಭೋದನೆ ಮಾಡುತ್ತಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಎರಡೂ ಕೆಲಸ ಮಾಡುವುದು ಕಷ್ಟ. ಭೋದನೆ ಮಾಡುತ್ತಿದ್ರೂ, ಅವರಿಗೆ ಸಾಹಿತ್ಯದ ಮೇಲೆ ಹೆಚ್ಚು ಆಸಕ್ತಿಯಿತ್ತು. ಅವರ ನಿಧನದಿಂದ ಇಂದು ಸಾರಸ್ವತ ಲೋಕ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಭೈರಪ್ಪನವರಿಗೆ ಚಿರಶಾಂತಿ ಕೋರುತ್ತ, ಕುಟುಂಬಸ್ಥರಿಗೆ ಹಾಗೂ ಅವರ ಅಭಿಮಾನಿಗಳಿಗೆ ಭೈರಪ್ಪ ಅವರ ಅಗಲಿಕೆಯ ದುಃಖ ಬರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.















