ಮಂಡ್ಯ: ಮದ್ದೂರು ಕ್ಷೇತ್ರದಿಂದ ಕದಲೂರು ಉದಯ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಎಸ್.ಎಂ.ಕೃಷ್ಣ ಅವರ ಅಣ್ಣನ ಮಗ ಎಸ್. ಗುರುಚರಣ್ ಗುರುವಾರ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರ್ಪಡೆಯಾದರು.
ಗುರುವಾರ ಬೆಳಿಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮದ್ದೂರು ತಾಲ್ಲೂಕು, ಸೋಮನಹಳ್ಳಿ ಗ್ರಾಮದ ಗುರುಚರಣ್ ನಿವಾಸಕ್ಕೆ ಭೇಟಿ ನೀಡಿದ್ದರು, ಈ ವೇಳೆ ಎಚ್ ಡಿಕೆ ಸಮ್ಮುಖದಲ್ಲಿ ಗುರುಚರಣ್ ಹಾಗೂ ಅವರ ಬೆಂಬಲಿಗರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಗುರು ಚರಣ್ , ಡಿ ಕೆ ಶಿವಕುಮಾರ್ ನಮ್ಮ ಕುಟುಂಬಕ್ಕೆ ಮೋಸ ಮಾಡಿದ್ದಾರೆ. ನನಗೆ ಟಿಕೆಟ್ ನೀಡುವುದಾಗಿ ಹೇಳಿ ನನ್ನನ್ನ ಮುಗಿಸಿದರು. ಕಾಂಗ್ರೆಸ್ ನಿರ್ನಾಮವಾಗೋದು ಸತ್ಯ ಎಂದು ಕಿಡಿಕಾರಿದರು.
Saval TV on YouTube