ರಾಜಸ್ಥಾನ: ರೈಲು ಹತ್ತುವಾಗ ಆಯಾತಪ್ಪಿ ಬಿದ್ದು ತಂದೆ ಹಾಗೂ ಐದು ವರ್ಷದ ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬೂ ರೋಡ್ ನಿಲ್ದಾಣದಲ್ಲಿ ನಡೆದಿದೆ.
ಭೀಮರಾವ್ ಅವರು ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಪಾಲಿ ಜಿಲ್ಲೆಯ ಫಲ್ನಾಗೆ ತೆರಳಲು ಬಂದಿದ್ದರು. ಭೀಮ್ ರಾವ್ ಕಿಕ್ಕಿರಿದು ತುಂಬಿದ್ದ ಸಬರಮತಿ – ಜೋಧ್’ಪುರ ಪ್ಯಾಸೆಂಜರ್ ರೈಲು ಹತ್ತುವಾಗ ಸಮತೋಲನ ಕಳೆದುಕೊಂಡು ಮಗಳು ಮೋನಿಕ ಜೊತೆ ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ ರೂ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹಗಳನ್ನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.