ಬೆಂಗಳೂರು/ಚಾಮರಾಜನಗರ : ನಾಳೆಯಿಂದ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭ ಆಗಲಿದೆ. ರಾಜ್ಯ ಸರ್ಕಾರ ಕೇವಲ 50% ಸಫಾರಿ ಪ್ರಾರಂಭಕ್ಕೆ ಅನುಮತಿ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ನಾಗರಹೊಳೆ, ಬಂಡೀಪುರದಲ್ಲಿ ಹುಲಿ ದಾಳಿಯಿಂದ ಅನೇಕ ಜನರು ಸಾವನ್ನಪ್ಪಿದ್ದರು. ನಮ್ಮ ಸರ್ಕಾರದ ಆದ್ಯತೆ ಮಾನವ ಜೀವ. ಪ್ರತಿ ಜೀವ ಅತ್ಯಮೂಲ್ಯವಾದದ್ದು. ಯಾವುದೇ ಜೀವಕ್ಕೆ ಹಾನಿಯಾಗಬಾರದು ಎಂದು ನ.7ರಿಂದ ಸಫಾರಿ ಬಂದ್ ಮಾಡಿ, ಆದೇಶ ಮಾಡಿದ್ವಿ.
ಅರಣ್ಯ ಸಚಿವ ಆದ ಮೇಲೆ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನೇಕ ಕ್ರಮ ಕೈಗೊಂಡಿದ್ದೇವೆ. ಕ್ರಮ ಕೈಗೊಂಡರೂ ಕೂಡ ಪ್ರತಿ ವರ್ಷ 45-50 ಜನ ಸಾಯ್ತಾ ಇದ್ದಾರೆ. ಇದು ನೋವಿನ ಸಂಗತಿ. ಇದೀಗ ಮತ್ತೆ ನಾಗರಹೊಳೆ, ಬಂಡೀಪುರದಲ್ಲಿ ನಾಳೆಯಿಂದ (ಫೆ.19) ಸಫಾರಿ ಪುನರಾರಂಭ ಎಂದು ತಿಳಿಸಿದ್ದಾರೆ.















