ಮನೆ ಯೋಗಾಸನ ಶಲಭಾಸನ

ಶಲಭಾಸನ

0

ಶಲಭಾಸನದಲ್ಲಿ ಏಕಪಾದ ಶಲಭಾಸನ ಮತ್ತು ದ್ವಿಪಾದ ಅಥವಾ ಪೂರ್ಣ ಶಲಭಾಸನಗಳೆಂಬ ಪ್ರಭೇದಗಳೂ ಇವೆ. ಶಲಭ ಎಂದರೆ ಸಂಸ್ಕೃತದಲ್ಲಿ ಮಿಡತೆ, ಈ ಆಸನದ ಅಭ್ಯಾಸದಲ್ಲಿ ಶರೀರವು ಮಿಡತೆಯ ಆಕಾರವನ್ನು ಹೊಂದುವುದು.

Join Our Whatsapp Group

ಮಾಡುವ ಕ್ರಮ

1)    ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಬೋರಲಾಗಿ, (ಕೆಳ ಮುಖ ಮಾಡಿ) ನೇರವಾಗಿ ಮಲಗಿಕೊಳ್ಳಬೇಕು.

2)   ನಂತರ ಎರಡೂ ಕೈಗಳನ್ನು ತೊಡೆಗಳ  ಕೆಳಗೆ ಇಡಬೇಕು.

3)    ನಿಧನವಾಗಿ ತಲೆಯನ್ನು ಚಿತ್ರದಲ್ಲಿರುವಂತೆ ಮೇಲಕ್ಕೆತ್ತಬೇಕು.

4)   ಹಾಗೆಯೇ ಎರಡೂ ಕಾಲುಗಳನ್ನು ನಿಧನವಾಗಿ ಮೇಲಕ್ಕೆತ್ತಬೇಕು. ಆಗ ಎದೆ ಮತ್ತು ನಾಭಿಯ ಪ್ರದೇಶ ಭೂಮಿಯ ಮೇಲೆ ಇರುತ್ತವೆ.  (ಎರಡು ಕಾಲುಗಳನ್ನು ಒಮ್ಮೆಲೇ ಎತ್ತುವುದರ ಬದಲು ಮೊದಲು ಬಲಗಾಲನ್ನು ಎತ್ತಿ ನಂತರ ಎಡಗಾಲನ್ನು ಎತ್ತುವುದನ್ನು ಏಕಪಾದ ಶಲಭಸನವೆನ್ನುತ್ತಾರೆ.)  ಮಂಡಿಗಳನ್ನು ಸಾಧ್ಯವಾದಷ್ಟೂ ನೇರ ಮಾಡಿ, 1ರಿಂದ 3 ನಿಮಿಷಗಳವರೆಗೆ ಇದೇ ಸ್ಥಿತಿಯಲ್ಲಿದ್ದು ಅನಂತರ ಕಾಲುಗಳನ್ನು ಕೆಳಗಿಳಿಸಬಹುದು.

ಲಾಭಗಳು

ಈ ಆಸನದ ಅಭ್ಯಾಸದಿಂದ ಬೊಜ್ಜು ಕರಗುವುದು, ತೊಡೆಗಳಲ್ಲಿ ದೃಢತೆ ಹೆಚ್ಚುವುದು ಮತ್ತು ಬೆನ್ನುನೋವು ಹಾಗೂ ಕಟಿ ಪ್ರದೇಶದಲ್ಲಿನ ನೋವುಗಳು ನಿವಾರಣೆಯಾಗುವುವು.