ಈ ಭಂಗಿಯ ಅಭ್ಯಾಸವು ಈ ಆಸನದ ಒಂದಕ್ಕಿಂತಲೂ ಕಷ್ಟಕರವಾದದ್ದು.
ಅಭ್ಯಾಸ ಕ್ರಮ
1. ಮೊದಲು ಸಾಲಂಬ ಸರ್ವಾಂಗಸನ ಒಂದುವನ್ನು ಮಾಡಿ ಮುಗಿಸಬೇಕು.
2. ಈ ಭಂಗಿಯಲ್ಲಿ ಕಾಲುಗಳನ್ನು ಬೆನ್ನನ್ನೂ ಆದಷ್ಟು ಚಲಿಸದಂತೆ ಶಬ್ದವಾಗಿ ನಿಲ್ಲಿಸಬೇಕು.
3. ಬಳಿಕ,ಮುಂಡದ ಹಿಂಬದಿಗಿಟ್ಟ ಕೈಗಳನ್ನು ತೆಗೆದು, ಕೈ ಬೆರಳುಗಳನ್ನು ಒಂದರಲ್ಲೋಂದು ಸೇರಿಸಿ ಹಣೆದು,ಮಣಿಕಟ್ಟುಗಳನ್ನು ತಿರುಗಿಸಿ, ತೋಳುಗಳನ್ನು ನೀಲವಾಗಿ ಚಾಚಬೇಕು. ಆಗ ಹೆಬ್ಬೆರಳುಗಳು ನೆಲವನ್ನಂಟಿ ಅಂಗೈಗಳನ್ನು ಮೇಲ್ಮೊಗವಾಗಿರುತ್ತವೆ ಇದರಲ್ಲಿ ನೇರವಾಗಿ ಮೇಲೆತ್ತಿ ನಿಲ್ಲಿಸಿದ ದೇಹದ ಒಂದು ಕಡೆ ತಲೆ ಮತ್ತೊಂದು ಕಡೆ ನೀಳಲಾಗಿ ಚಾಚಿಟ್ಟು ತೋಳುಗಳು ಹೀಗೆ ಇರುತ್ತವೆ.
4. ಸರ್ವಾಂಗಾಸನ ಒಂದುವನ್ನು ಮಾಡಿ ಮುಗಿಸಿದಮೇಲೆ ಈ ಭಂಗಿಯಲ್ಲಿ ಸುಮಾರು ಒಂದು ನಿಮಿಷದ ಕಾಲ ನೆಲೆಸಿರಬೇಕು.
ಪರಿಣಾಮಗಳು
ಈಭಂಗಿಯಲ್ಲಿ ಬೆನ್ನಿನ ಮಾಂಸ ಖಂಡಗಳನ್ನು ಹಿಗ್ಗಿಸಿ,ಸಮತೋಲನ ಸ್ಥಿತಿಯಲ್ಲಿಡುವುದರಿಂದಲೂ ಮತ್ತು ದೇಹದ ಬಾರವೆಲ್ಲವನ್ನೂ ಕತ್ತಿನ ಹಿಂಭಾಗವೇ ವಹಿಸುವುದರಿಂದಲೂ ಬೆನ್ನು ಮತ್ತು ಕತ್ತು ಬಲಗೊಳ್ಳುವವು; ಅಲ್ಲದೆ ತೋಳುಗಳ ಮಾಂಸಖಂಡಗಳು ಹುರುಪುಗೊಳ್ಳಃವವು.