ಮನೆ ಯೋಗಾಸನ ಸಮಕೋನಾಸನ

ಸಮಕೋನಾಸನ

0

      ‘ಸಮ’ವೆಂದರೆ ಸರಿ, ನೇರ ಹೋಲುವ,ಒಂದೇ.‘ಕೋನ’ವನ್ನೆಳೆಯುವ  ಯಂತ್ರದ ಒಂದು ಬಿಂದು. ಈ ಆಸನದಲ್ಲಿ ಕಾಲುಗಳನ್ನು ಎಡ ಬಲಪಕ್ಕಗಳಿಗೆ ಅಗಲಿಸಿಡಬೇಕು ಮತ್ತು ಕೈಗಳನ್ನು  ಜೋಡಿಸಿ ಎದೆಯ ಮುಂಗಡೆಯಿಡಬೇಕು. ಈ ಅಸನಾಭ್ಯಾಸವು ಈ ಹಿಂದಿನ ‘ಹನೂಮಾನಾಸನ’ಕ್ಕಿಂತ ಕಷ್ಟಕರ. ಅಲ್ಲದೆ ಈ ಆಸನದಲ್ಲಿ ಕಾಲುಗಳು ಮತ್ತು ವಸ್ತಿಕುಹರದ ಪ್ರದೇಶ ಒಂದೇ ರೇಖೆಯಲ್ಲಿರುತ್ತದೆ.

 ಅಭ್ಯಾಸ ಕ್ರಮ :

1. ಮೊದಲು ತಾಡಾಸನದಲ್ಲಿ ನಿಲ್ಲಬೇಕು, ಬಳಿಕ ಕೈಗಳನ್ನು ಟೊಂಕಗಳ ಮೇಲಿಟ್ಟು ಕಾಲುಗಳನ್ನು ಮುಂಡದ ಎಡ ಬಲಪಕ್ಕಗಳಿಗೆ ಶಕ್ತಿಯಾದ್ದಷ್ಟೂ ಅಗಲಿಸಿ, ಹಿಗ್ಗಿಸಿ ಚಾಚಿಡಬೇಕು.

2. ಆಮೇಲೆ,ಅಂಗೈಗಳನ್ನು ನೆಲದಮೇಲೂರಿ ಉಸಿರನ್ನು ಹೊರಕ್ಕೆ ಬಿಡುತ್ತ ಕಾಲುಗಳನ್ನು ಪಕ್ಕ ಪಕ್ಕಗಳಲ್ಲಿ ಮುಂದೆ ಮುಂದಕ್ಕೆ ಸರಿಸುತ್ತ ಕಡೆಗೆ ಎರಡೂ ಕಾಲುಗಳನ್ನು ಇರ್ಕೆಲಗಳಿಗೂ ನೀಳವಾಗಿ ಚಾಚಿ, ಅವನ್ನು ಒಂದೇ ರೇಖೆಯಲ್ಲಿರುವಂತೆ ಅಳವಡಿಸಬೇಕು.ಕಾಲುಗಳ ಹಿಂಬದಿಗಳು ಅದರಲ್ಲೂ ಮಂಡಿಗಳ ಹಿಂಬದಿಗಳು ನೆಲವನ್ನು ಚೆನ್ನಾಗಿ ಮುಟ್ಟುವಂತಿರಬೇಕು.

3. ಅನಂತರ ಅಂಗೈಗಳನ್ನು ಎದೆಯ ಮುಂಗಡಗೆ ಜೋಡಿಸಿಟ್ಟು ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನೆಲೆಸಬೇಕು.

4. ಆ ಬಳಿಕ, ಅಂಗೈಗಳನ್ನು ನೆಲದಮೇಲೂ ರೀ ಟೊಂಕ ಗಳನ್ನು ಮೇಲಿಳಿಸಿ ಕಾಲುಗಳನ್ನು ಹತ್ತಿರ ಹತ್ತಿರ ಬರುವಂತೆ ಸರಿಸುತ್ತ ಕಡೆಗೆ ‘ಉತ್ತಾನಾಸನ’ದ ಭಂಗಿಗೆ ತರಬೇಕು. ಆಮೇಲೆ ‘ತಾಂಡಾಸನ’ದಲ್ಲಿ ನಿಂತು ಮಿಶ್ರಮಿಸಿಕೊಳ್ಳಬೇಕು.

 ಪರಿಣಾಮಗಳು :

   ಈ ಆಸನದಲ್ಲಿ ಟೊಂಕಗಳ ಕೀಲುಗಳಿಗೆ ಒಳ್ಳೆಯ ವ್ಯಾಯಾಮ ದೊರಕುವುದಲ್ಲದೆ,ಕಾಲುಗಳನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸುವಂತಾಗುವುದು.ಇದರಿಂದ ಬೆನ್ನೆಲುಬು ಹಿಗ್ಗಿ ಅದರ ತಳಭಾಗದಲ್ಲುಂಟಾಗುವ ನ್ಯೂನ್ಯತೆ ಯಾವುದೇ ಇರಲಿ ಅದು ಸರಿ ಹೋಗುವುದು.  ಈ ಆಸನವೂ ಕೂಡ ‘ಹನೂಮಾನಸನ’  ದಂತೆಯೇ ಕಾಲುಗಳಲ್ಲಿಯ ಮಾಂಸಖಂಡಗಳಿಗೆ ಹುರುಪು ಕೊಟ್ಟು ಅವುಗಳನ್ನು ಸರಿಯಾದ ಆಕಾರದಲ್ಲಿರುವುದು.ಅಲ್ಲದೆ ಈ ಆಸನವು ಅಂಡವಾಯುವು ಬೆಳೆಯದಂತೆ ತಡೆಗಟ್ಟುವುದು ಮತ್ತು ಇದು ರಕ್ತ ಪರಿಚಲನೆಗೆ ಹೆಚ್ಚು ನೆರವು ನೀಡಿ ವಸ್ತಿಕುಹರ ಪ್ರದೇಶ ಮತ್ತು ಜೆನೆಂದ್ರಿಯಗಳನ್ನು ಆರೋಗ್ಯ ಸ್ಥಿತಿಯಲ್ಲಿಡುವಂತೆ ಮಾಡುವುದು.