ಮನೆ ಮನರಂಜನೆ ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಸಿನಿಮಾ ಬಿಡುಗಡೆ

ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಸಿನಿಮಾ ಬಿಡುಗಡೆ

0

“ಸಂಭವಾಮಿ ಯುಗೇ ಯುಗೇ’ ಚಿತ್ರದ ಮೊದಲ ಹಾಡು ಡೋಲು ತಮಟೆ ವಾದ್ಯ ಇತ್ತೀಚೆಗೆ ಬಿಡುಗಡೆಯಾಯಿತು.

Join Our Whatsapp Group

ರಾಜಲಕ್ಷ್ಮೀ ಎಂಟರ್ಟೆನ್ಮೆಂಟ್‌ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ ಈ ಸಿನಿಮಾವನ್ನು ಚೇತನ್‌ ಚಂದ್ರಶೇಖರ್‌ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಜಯ್‌ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಅವರ ನೃತ್ಯ ಸಂಯೋಜಿಸಿದ್ದಾರೆ. ಪೂರನ್‌ ಶೆಟ್ಟಿಗಾರ್‌ ಸಂಗೀತ ಸಂಯೋಜಿಸಿದ್ದಾರೆ. ನಕಾಶ್‌ ಹಾಗೂ ಸ್ಪರ್ಶ ಹಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಚೇತನ್‌ ಶೆಟ್ಟಿ, “ಇದು ನನ್ನ ಮೊದಲ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟು ಇಂಥದ್ದೊಂದು ಅವಕಾಶ ಕೊಟ್ಟ ನಿರ್ಮಾಪಕಿ ಪ್ರತಿಭಾ ಅವರಿಗೆ ಧನ್ಯವಾದಗಳು. ಇದೊಂದು ಕಮರ್ಷಿಯಲ್‌ ಥ್ರಿಲ್ಲರ್‌ ಚಿತ್ರ. ಮಂಡ್ಯ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಾನು ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೆ. ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಮೂಡಿಬಂದಿರುವ ಸಿನಿಮಾ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲೆಸಬೇಕು ಎಂಬುದೇ ಚಿತ್ರದ ಕಥಾ ಸಾರಾಂಶ. ಜೂನ್‌ 21ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಇದು ಕಮರ್ಷಿಯಲ್‌ ಚಿತ್ರವಾದರೂ ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳಿವೆ’ ಎಂದರು ನಿರ್ದೇಶಕ ಚೇತನ್‌ ಚಂದ್ರಶೇಖರ್‌ ಶೆಟ್ಟಿ.

ಇದೊಂದು ಕೃಷಿ ಮತ್ತು ರೈತರ ಸಿನಿಮಾ ಎಂದು ಮಾತನಾಡಿದ ನಾಯಕ ಜಯ್‌ ಶೆಟ್ಟಿ, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ ಎಂದರು

ಚಿತ್ರದಲ್ಲಿ ನಿಶಾ ರಜಪೂತ್‌ ನಾಯಕಿ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಶೋಕ್‌ ಕುಮಾರ್‌ ಹಾಗೂ ಮಧುರಗೌಡ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಾಜೇಂದ್ರ ಕಾರಂತ್‌, ಅಶ್ವಿ‌ನ್‌ ಹಾಸನ್‌, ವಿಕ್ಟರಿ ವಾಸು, ಛಾಯಾ ಗ್ರಾಹಕ ರಾಜು ಹೆಮ್ಮಿಗೆಪುರ ಈ ಸಮಾರಂಭದಲ್ಲಿ ಹಾಜರಿದ್ದರು.

ಹಿಂದಿನ ಲೇಖನಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ವಲ್ಲೂರಿ ಕಾಮೇಶ್ವರ ರಾವ್ ಪ್ರಮಾಣವಚನ ಸ್ವೀಕಾರ
ಮುಂದಿನ ಲೇಖನಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ