ಮನೆ ಕಾನೂನು ಸಲಿಂಗ ವಿವಾಹ ಪ್ರಕರಣ: ವಿಚಾರಣೆಯಿಂದ ಹಿಂದೆಸರಿದ ನ್ಯಾ.ಖನ್ನಾ

ಸಲಿಂಗ ವಿವಾಹ ಪ್ರಕರಣ: ವಿಚಾರಣೆಯಿಂದ ಹಿಂದೆಸರಿದ ನ್ಯಾ.ಖನ್ನಾ

0

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ಕಳೆದ ವರ್ಷದ ತೀರ್ಪನ್ನು ಮರು ಪರಿಶೀಲಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿ ಸಂಜೀವ್‌ ಖನ್ನಾ ಬುಧವಾರ ಹಿಂದೆ ಸರಿದಿದ್ದಾರೆ.

Join Our Whatsapp Group

ವೈಯಕ್ತಿಕ ಕಾರಣಗಳಿಂದಾಗಿ ಖನ್ನಾ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ  ಸಿಜಿಐ ಡಿ.ವೈ.ಚಂದ್ರಚೂಡ ಅವರು ಹೊಸ ನ್ಯಾಯಪೀಠ ರಚಿಸಬೇಕಾಗಿದೆ