ಬೆಂಗಳೂರು: ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.
ನಗರದಲ್ಲಿ ಗಂಧದ ದಂಧೆ ಮತ್ತೆ ಶುರುವಾಗಿದ್ದು ರಾಜ್ಯ ಅರಣ್ಯ ಜಾಗೃತದಳ ಸಿಬ್ಬಂದಿ ಗಂಧದ ಮರಗಳ ಕಳವು ಪ್ರಕರಣ ಭೇದಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ K.R.ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್ ಮೇಲೆ ರಾಜ್ಯ ಅರಣ್ಯ ಜಾಗೃತದಳ ದಾಳಿ ನಡೆಸಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಗಂಧದ ತುಂಡುಗಳನ್ನು ಪತ್ತೆ ಮಾಡಿ ಸೀಜ್ ಮಾಡಿದ್ದಾರೆ.
ಆರೋಪಿಗಳು ನೂರಾರು ಗಂಧದ ತುಂಡುಗಳನ್ನು ಸಂಗ್ರಹಿಸಿ ಅಕ್ರಮ ಸಾಗಾಟಕ್ಕ ಯತ್ನ ನಡೆಸಿದ್ದರು. ಸದ್ಯ ಈಗ ಆರೋಪಿಗಳನ್ನು ಬಂಧಿಸಿ ಗಂಧದ ತುಂಡು ಜಪ್ತಿ ಮಾಡಲಾಗಿದೆ. ಎರಡು ಟನ್ಗೂ ಅಧಿಕ ಗಂಧದ ಮರಗಳನ್ನು ಮರಗಳ್ಳರು ಸಂಗ್ರಹಿಸಿದ್ದು ಹೇಗೆ? ಅಕ್ರಮ ಗಂಧದ ಮರಗಳು ಸರ್ಕಾರದ ಕಾರ್ಖಾನೆ ಸೇರಿದ್ದು ಹೇಗೆ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.