ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾದ ‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಸ್ಟಾರ್ ಕಲಾವಿದ ಸಂಜಯ್ ದತ್ ಕೂಡ ಇದರಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.
ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಸಂಜಯ್ ದತ್ ಮತ್ತು ದಳಪತಿ ವಿಜಯ್ ಅವರು ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರದ್ದೂ ಗ್ಯಾಂಗ್ ಸ್ಟರ್ ಪಾತ್ರ ಎನ್ನಲಾಗಿದೆ.
ಈ ಸಿನಿಮಾಗಾಗಿ ಸಂಜಯ್ ದತ್ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಲಿಯೋ’ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಕಾರಣಗಳಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
‘ಕೆಜಿಎಫ್: ಚಾಪ್ಟರ್ 2’ ಬಳಿಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಂಜಯ್ ದತ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ‘ಲಿಯೋ’ ಸಿನಿಮಾದಲ್ಲಿ ಅವರಿಗೆ ಕೈ ತುಂಬ ಸಂಭಾವನೆ ನೀಡಲಾಗುತ್ತಿದೆ. ಅವರ ಗೆಟಪ್ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಈ ಮೊದಲು ರಿಲೀಸ್ ಆದ ಟೈಟಲ್ ಟೀಸರ್ ನಲ್ಲಿ ದಳಪತಿ ವಿಜಯ್ ಅವರು ಚಾಕೊಲೇಟ್ ಮಾಡುತ್ತಿರುವ ದೃಶ್ಯ ಹೈಲೈಟ್ ಆಗಿತ್ತು. ಅದೇ ರೀತಿ ಅವರು ಆಯುಧ ತಯಾರಿಸುವುದನ್ನೂ ತೋರಿಸಲಾಗಿತ್ತು. ಇದರಿಂದ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ.















