ಮನೆ ಮನರಂಜನೆ ಸಂಜಯ್‌ ದತ್‌ ಹುಟ್ಟುಹಬ್ಬ: ʼಕೆಡಿʼ ಚಿತ್ರತಂಡದಿಂದ ಸ್ಪೆಷಲ್‌ ಪೋಸ್ಟರ್‌ ರಿಲೀಸ್‌

ಸಂಜಯ್‌ ದತ್‌ ಹುಟ್ಟುಹಬ್ಬ: ʼಕೆಡಿʼ ಚಿತ್ರತಂಡದಿಂದ ಸ್ಪೆಷಲ್‌ ಪೋಸ್ಟರ್‌ ರಿಲೀಸ್‌

0

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್‌ ಕಾಂಬಿನೇಷನ್‌ ನ ಪ್ಯಾನ್‌ ಇಂಡಿಯಾ ʼಕೆಡಿʼ ಚಿತ್ರತಂಡ ಸಂಜಯ್‌ ದತ್‌ ಅವರ ಹುಟ್ಟುಹಬ್ಬಕ್ಕೆ ಸ್ಪೆಷೆಲ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.

Join Our Whatsapp Group

ಧ್ರುವ ಸರ್ಜಾ ಮಾಸ್‌ ಅವತಾರದಲ್ಲಿ ʼಕೆಡಿʼಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್‌ ಆಗಿ ಸಂಜಯ್‌ ದತ್‌ ಕಾಣಿಸಿಕೊಳ್ಳಲಿದ್ದಾರೆ.

ʼಕೆಜಿಎಫ್‌ʼ ಬಳಿಕ ಬ್ಯಾಕ್‌ ಟು ಬ್ಯಾಕ್‌  ಸೌತ್‌ ಸಿನಿಮಾಗಳಲ್ಲಿ ವಿಲನ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳುತ್ತಿರುವ ʼಮುನ್ನಾ ಭಾಯಿʼ ಪ್ಯಾನ್‌ ಇಂಡಿಯಾ ʼಕೆಡಿʼ ಖಡಕ್‌ ನೆಗಟಿವ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಂಜಯ್‌ ದತ್‌ ಅವರ 65ನೇ ಹುಟ್ಟುಹಬ್ಬದಂದು ʼಕೆಡಿʼ ಚಿತ್ರತಂಡ ಅವರ ಪಾತ್ರದ ಫಸ್ಟ್‌ ಲುಕ್‌ ಪೋಸ್ಟರ್‌ನ್ನು ರಿಲೀಸ್‌ ಮಾಡಿದೆ. ಖಾಕಿಯ ಲುಕ್‌ ನಲ್ಲಿ, ಲಾಠಿಯನ್ನಿಡಿದ ಸ್ಟೈಲ್‌ ನಲ್ಲಿ ಸಂಜು ಬಾಬಾ ಕಾಣಿಸಿಕೊಂಡಿದ್ದಾರೆ.

ಸಂಜಯ್‌ ದತ್‌ ಅವರ ಮಾಸ್‌ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ʼಕೆಡಿʼ ದರ್ಶನಕ್ಕಾಗಿ ಮುಂದೆ ನೋಡುತ್ತಿದ್ದಾರೆ. ʼಕೆಡಿʼಯಲ್ಲಿ ಸಂಜಯ್‌ ದತ್‌ ʼಧಕ್‌ ದೇವʼನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಚಂದನವನದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿರುವ ʼಕೆಡಿʼ ಒಂದಷ್ಟು ಗ್ಲಿಂಪ್ಸ್‌ ಹಾಗೂ ಪೋಸ್ಟರ್‌ ನಿಂದ ಸಖತ್‌ ಗಮನ ಸೆಳೆದಿದೆ. 1970 ದಶಕದಲ್ಲಿನ ಸತ್ಯ ಘಟನಾ ಆಧಾರಿತ ಗ್ಯಾಂಗ್‌ಸ್ಟರ್‌ ಕಥೆಯನ್ನು ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.

ಧ್ರುವ ಸರ್ಜಾ, ವಿ.ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ನೋರಾ ಫತೇಹಿ, ಜಿಶು ಸೆಂಗುಪ್ತ,ಸೇರಿದಂತೆ ಅನೇಕರು ನಟಿಸಿದ್ದಾರೆ.

ಇದೇ ವರ್ಷದ ಡಿಸೆಂಬರ್‌ ನಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.