ಮನೆ ಮನರಂಜನೆ ತೆರೆಗೆ ಬರಲು ಸಿದ್ದವಾದ ಸಂಜು ವೆಡ್ಸ್‌ ಗೀತಾ-2

ತೆರೆಗೆ ಬರಲು ಸಿದ್ದವಾದ ಸಂಜು ವೆಡ್ಸ್‌ ಗೀತಾ-2

0

ನಾಗಶೇಖರ್‌ ನಿರ್ದೇಶನದ “ಸಂಜು ವೆಡ್ಸ್‌ ಗೀತಾ-2′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರತಂಡ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಚಿತ್ರ ಜನವರಿ 10ರಂದು ತೆರೆಗೆ ಬರಲಿದೆ. ಈ ಮೂಲಕ ರೊಮ್ಯಾಂಟಿಕ್‌ ಲವ್‌ಸ್ಟೋರಿಯೊಂದು ವರ್ಷಾರಂಭದಲ್ಲೇ ತೆರೆ ಕಂಡಂತಾಗುತ್ತದೆ.

Join Our Whatsapp Group

 ಪವಿತ್ರಾ ಇಂಟರ್‌ ನ್ಯಾಷನಲ್‌ ಮೂವೀಮೇಕರ್ಸ್‌ ಅಡಿಯಲ್ಲಿ ಛಲವಾದಿ ಕುಮಾರ್‌ ಅವರು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ನಾಗಶೇಖರ್‌ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರನ ಕಥೆಯನ್ನು ಹೇಳಿದ್ದಾರೆ. ಈ ಕುರಿತು ಮಾತನಾಡುವ ನಾಗಶೇಖರ್‌, “ಶಿಡ್ಲಘಟ್ಟದಿಂದ ಸ್ವಿಟ್ಜರ್‌ ಲ್ಯಾಂಡ್‌ ಹೀಗೆ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಚಿತ್ರವೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಚಿತ್ರದಲ್ಲಿ 5 ಹಾಡುಗಳಿವೆ. ನಮ್ಮ ಮಣ್ಣಿನ ಕಥೆ ಮಾಡಲು ಹೊರಟಾಗ ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ ಕಣ್ಣಮುಂದೆ ಬಂತು, ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಚಿತ್ರದಲ್ಲಿ ಹೇಳಹೊರಟಿದ್ದೇವೆ, ಇದರಲ್ಲಿ ಎಲ್ಲವೂ ಹೊಸದಾಗಿರುತ್ತೆ. ನಿರ್ಮಾಪಕ ಕುಮಾರ್‌ ಅವರು ನೀಡಿದ ಸಹಕಾರದಿಂದ ಚಿತ್ರ ಇಷ್ಟು ಅದ್ಧೂರಿಯಾಗಿ ಬಂದಿದೆ. ಈಗಿನ ಕಾಲದ ಲವ್‌ಸ್ಟೋರಿ ಜೊತೆಗೆ ಒಂದು ಸರ್‌ಪ್ರೈಸ್‌ ಕೂಡ ಚಿತ್ರದಲ್ಲಿದೆ’ ಎನ್ನುತ್ತಾರೆ.

ಚಿತ್ರದ ವಿಶೇಷ ಪಾತ್ರದಲ್ಲಿ ನಟ ಚೇತನ್‌ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್‌ ವಿ. ಸಂಭ್ರಮ್‌ ಅವರ ಸಂಗೀತ ನಿರ್ದೇಶನ, ಡಿಫ‌ರೆಂಟ್‌ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ, ರಾಗಿಣಿ ದ್ವಿವೇದಿ, ಚೇತನ್‌ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್‌ ಅಲ್ಲದೇ ಖಳನಟ ಸಂಪತ್‌ ಕುಮಾರ್‌ ಸೇರಿದಂತೆ ಸಾಕಷ್ಟು ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ.