ಮನೆ ರಾಜ್ಯ ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ – ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು..!

ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ – ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು..!

0

ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ-ಸಡಗರ. ರಾಜ್ಯಾದ್ಯಂತ ಸುಗ್ಗಿ ಹಬ್ಬ ಜೋರಾಗಿದ್ದು, ಜನ ಸಹ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಖರೀದಿ ಕೂಡ ಬಲು ಜೋರಾಗಿದೆ. ಆದರೆ ಹೂ, ಹಣ್ಣು, ಕಬ್ಬುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ.

ರಾಜ್ಯಾದ್ಯಂತ ಸಂಕ್ರಾತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಬ್ಬವನ್ನು ಸೂರ್ಯ ಮಕರ ರಾಶಿಗೆ ಪ್ರವೇಶದ ದಿನ ಅಂತ ಎಳ್ಳು ಬೆಲ್ಲ ಹಂಚಿ ಹರ್ಷದಿಂದ ಆಚರಿಸುತ್ತಾರೆ. ಅದರಂತೆ ಸಿಲಿಕಾನ್ ಸಿಟಿ ಜನರು ಸಂಕ್ರಾತಿ ಹಬ್ಬವನ್ನ ಭರ್ಜರಿಯಾಗಿ ಸಲೆಬ್ರೇಟ್ ಮಾಡೋದಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.

ಹೂ, ಕಬ್ಬು, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಜೊತೆಗೆ ರೆಡಿಮೆಡ್ ಎಳ್ಳು-ಬೆಲ್ಲಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಗಗನಕ್ಕೇರಿರೋ ಹೂವಿನ ದರ ಕಂಡು ಗ್ರಾಹಕರು ಕಂಗಾಲಾಗಿದ್ದಾರೆ.

ಮಕರ ಸಂಕ್ರಾತಿ ಹಬ್ಬಕ್ಕೆ ಖರೀದಿ ಬಲು ಜೋರಾಗಿದ್ದು, ಹೂ, ಹಣ್ಣಿನ ಜೊತೆ ರೆಡಿಮೇಡ್ ಎಳ್ಳು ಬೆಲ್ಲಕ್ಕೂ ಡಿಮ್ಯಾಂಡ್ ಹೆಚ್ಚಿದೆ. ಈ ಸಂಕ್ರಾಂತಿ ಹಬ್ಬ ನಿಮ್ಮ ಜೀವನದಲ್ಲಿ ಸುಖ-ಶಾಂತಿ-ಸಮೃದ್ಧಿ ನೀಡಲಿ.