ಮನೆ ಮನರಂಜನೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ವಿಮರ್ಶೆ

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ವಿಮರ್ಶೆ

0

ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್ ಎಂ. ಅವರ ಕಾಂಬಿನೇಷನ್ ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ (ಸೈಡ್ ಎ) ಸಿನಿಮಾ ಮೂಡಿಬಂದಿದೆ. ಹೇಮಂತ್ ಎಂ. ರಾವ್ ಅವರ ಟ್ರೇಡ್ ಮಾರ್ಕ್ ಅದನ್ನು ಅವರು ಈ ಬಾರಿಯೂ ಮುಂದುವರಿಸಿದ್ದಾರೆ. ಒಂದು ಗಾಢವಾದ ಪ್ರೇಮಕಥೆಯನ್ನು ಅವರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಆ ಕಥೆಗೆ ರಕ್ಷಿತ್ ಶೆಟ್ಟಿ ರುಕ್ಮಿಣಿ ವಸಂತ್ ಮುಂತಾದ ಕಲಾವಿದರು ಜೀವ ತುಂಬಿದ್ದಾರೆ.

ಮನು (ರಕ್ಷಿತ್ ಶೆಟ್ಟಿ) ಮತ್ತು ಪ್ರಿಯಾ (ರುಕ್ಮಿಣಿ ವಸಂತ್) ಎಂಬ ಇಬ್ಬರು ಮಧ್ಯಮ ವರ್ಗದ ಪ್ರೇಮಿಗಳ ಕಹಾನಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿದೆ. ಒಂದಷ್ಟು ಅನಿರೀಕ್ಷಿತ ಘಟನೆಗಳ ಕಾರಣದಿಂದ ಮನು ಜೈಲು ಸೇರುತ್ತಾನೆ. ಆ ಕಷ್ಟದ ಸಂದರ್ಭದಲ್ಲಿ ಈ ಪ್ರೇಮಿಗಳ ನಂಬಿಕೆ ಎಷ್ಟು ಗಟ್ಟಿಯಾಗಿರುತ್ತದೆ? ಮನು ಮಾಡಿದ ತಪ್ಪು ಏನು? ಅಂತಿಮವಾಗಿ ಆ ಕಷ್ಟದಿಂದ ಅವರು ಹೊರಬರುತ್ತಾರೋ ಇಲ್ಲವೋ ಎಂಬುದು ಈ ಸಿನಿಮಾದ ಕಥೆ. ಆದರೆ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಿರುವುದು ಅರ್ಧ ಕಥೆ ಮಾತ್ರ.

ಎರಡನೇ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಹೀಗೆ ಎರಡೂ ಭಾಗಗಳ ಚಿತ್ರೀಕರಣವನ್ನು ಒಟ್ಟಿಗೆ ಮುಕ್ತಾಯಗೊಳಿಸಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ನಿನ್ನೆ ( ಆಗಸ್ಟ್ 30 ) ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ಆಯೋಜಿಸಿತ್ತು. ಚಿತ್ರ ಮುಕ್ತಾಯಗೊಂಡ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಪರದೆ ಮುಂದೆ ನಿಂತು ಶೋಗೆ ಬಂದಿದ್ದವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ. ಸಿನಿಮಾ ಮುಗಿದ ಬಳಿಕ ಮಾತನಾಡಿದ ನಟ ರಕ್ಷಿತ್ ಶೆಟ್ಟಿ “ಚಿತ್ರ ಇಷ್ಟವಾದವರಿಗೂ ಧನ್ಯವಾದಗಳು ಹಾಗೂ ಚಿತ್ರ ಇಷ್ಟವಾಗದವರಿಗೂ ಧನ್ಯವಾದಗಳು. ವಿಮರ್ಶೆ ಬರಿಬೇಕಾದ್ರೆ ದಯವಿಟ್ಟು ಯಾರೂ ಸಹ ಚಿತ್ರ ಕುರಿತ ಮಾಹಿತಿಯನು ಬಿಟ್ಟುಕೊಡಬೇಡಿ ( ಕಥೆಗೆ ತಿರುವು ಕೊಡುವ ಅಂಶ ಅಥವಾ ಕಥೆಯಲ್ಲಿ ಬರುವ ಬಹುಮುಖ್ಯ ಸನ್ನಿವೇಶದ ಕಾರಣಗಳು ) ಏನು ಅನಿಸಿತೋ ಅದನ್ನೇ ಬರೆಯಿರಿ. ಆದರೆ ಸ್ಪಾಯಿಲರ್ ಇಲ್ಲದೇ ಇರುವ ಹಾಗೆ ಬರೆಯಿರಿ” ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿಕೊಂಡರು.

ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ನಿರ್ಮಾಣ ಪರಂವಾ ಪಿಕ್ಚರ್ಸ್ ಮಾಡಿದೆ. ನಿರ್ದೇಶನ ಹೇಮಂತ್ ಎಂ. ರಾವ್. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ರಮೇಶ್ ಇಂದಿರಾ, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು  ನಟಿಸಿದ್ದಾರೆ.

ಹಿಂದಿನ ಲೇಖನನಮ್ಮಲ್ಲಿಂದ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ: ಬಿ ಎಲ್ ಸಂತೋಷ್
ಮುಂದಿನ ಲೇಖನಹೆಚ್.ಡಿ.ಕುಮಾರಸ್ವಾಮಿ ಅವರು ಚೇತರಿಕೆ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್: ನಿಖಿಲ್ ಕುಮಾರಸ್ವಾಮಿ