ಸಿದ್ದಾಪುರ: ಡಬಲ್ ಎಂಜಿನ್ ಸರ್ಕಾರದಿಂದಾಗಿ ಸರ್ವೋದಯ, ನವೋದಯದ ಆಡಳಿತ ನಡೆಯುತ್ತಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಮಂಗಳವಾರ ₹ 59 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ, ಹಲವು ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.
ಜನಪ್ರಿಯ ಯೋಜನೆಗಿಂತ ಜನಪರ ಕಾರ್ಯಕ್ರಮ ನೀಡುವುದು ನಮ್ಮ ಆದ್ಯತೆ ಎಂದು ತಿಳಿಸಿದರು.
ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಕರ್ಯ ವೃದ್ಧಿಸುವ ಜತೆಗೆ ಸಿಬ್ಬಂದಿ ನೇಮಕಗೊಳಿಸಲಾಗಿದೆ. ಸಮಾಜದ ಎಲ್ಲ ವರ್ಗಗಳ ಏಳ್ಗೆಗೆ ಆದ್ಯತೆ ನೀಡಲಾಗಿದೆ ಎಂದರು.
ದುಡಿಮೆಯೆ ದೊಡ್ಡಪ್ಪ. ದುಡಿಯುವ ವರ್ಗ ದೇಶ ಕಟ್ಟುತ್ತಿದೆ ಎಂದರು.
ಜನಪರ ರಾಜಕಾರಣ ಮಾಡುವವರಿಗೆ ಸೋಲು ಇರದು. ವಿರೋಧ ಎದುರಿಸಿ ಯೋಜನೆ ಜಾರಿಗೊಳಿಸುವುದು ಇಚ್ಚಾಶಕ್ತಿ ಇರುವ ನಾಯಕರಿಗೆ ಖುಷಿ ಕೊಡುತ್ತದೆ ಎಂದರು.
Saval TV on YouTube