ಮಾಗಡಿ ತಾಲೂಕಿನ ಗಿರಿ ಕ್ಷೇತ್ರ ಬೆಟ್ಟ ಸಮುದ್ರ ಮಟ್ಟಕ್ಕಿಂತ 4024 ಅಡಿಗಳು ಎತ್ತರವಿದೆ. ಇಲ್ಲಿ ನೀರಿನ ಆಸರೆ ಇದೆ. ಬೆಟ್ಟ ಶಿಲಾಗಿರಿ.
ಬೆಟ್ಟದ ಬಳಿ ವೀರಭದ್ರ ಮತ್ತು ನರಸಿಂಹ ದೇವಾಲಯಗಳಿವೆ, ವೀರಭದ್ರ ದೇವಸ್ಥಾನ ದ್ರಾವಿಡ ಶೈಲಿಯದಿದೆ ದೊಡ್ಡ ದೇವಾಲಯ ಮುಂದೆ ಅರುವತ್ತು ಅಡಿಗಳಷ್ಟು ಎತ್ತರದೀಪ ಮಾಲೆ ಕಂಬವಿದೆ. ಕಂಬಕ್ಕೆ 2 ಭಾಗದಲ್ಲಿ ಕಲ್ಯಾಣ ಮಂಟಪವು, ಬಲ ಭಾಗದಲ್ಲಿ ಉಯ್ಯಾಲೆ ಕಂಬವು ಇದೆ. ವೀರಭದ್ರ ವಿಗ್ರಹ ನಾಲ್ಕುವರೆ ಅಡಿ ಎತ್ತರವಿದೆ.ಇಲ್ಲಿ ಪಕ್ಕದಲ್ಲಿ ಭದ್ರಕಾಳಿ ವಿಗ್ರಹವಿರುವ ಕೋಣೆಯಿದೆ ಮೂರಡಿ ಎತ್ತರದ ಸುಂದರ ವಿಗ್ರಹ ವೀರಭದ್ರ ದೇವಾಲಯದ ಪೂರ್ವದಿಕ್ಕಿನಲ್ಲಿ ನರಸಿಂಹ ದೇವರ ದೇವಸ್ಥಾನವಿದೆ.
ಬೆಂಗಳೂರು :-
ಕರ್ನಾಟಕ ರಾಜಧಾನಿ ನಗರ ಬೆಂಗಳೂರು ಕೆಲವು ಪ್ರಾಚೀನ ಹಾಗೂ ಐತಿಹಾಸಿಕ ಕಾಲದ ದೇವಾಲಯಗಳು ಹೊಂದಿದ್ದು, ಭಕ್ತರಿಗೆ ಪುಣ್ಯ ಪ್ರದ ಎನಿಸಿದೆ. ಇಲ್ಲಿ ನೋಡಬೇಕಾದ ಪ್ರಮುಖ ದೇವಾಲಯಗಳೆಂದರೆ…
1.ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ
2. ಗವಿ ಗಂಗಾಧರೇಶ್ವರ ದೇವಾಲಯ ಗವಿಪುರ
3. ಹಲಸೂರು ಸೋಮೇಶ್ವರ ದೇವಾಲಯ
4. ಸಜ್ಜನ್ ರಾವ್ ವೃತ್ತದ ಸುಬ್ರಹ್ಮಣ್ಯೇಶ್ವರ ದೇವಾಲಯ
ಈ ದೇವಾಲಯಗಳಿಗೆ ಭಕ್ತರು ಬಹು ಹಿಂದಿನಿಂದಲೂ ನಡೆದುಕೊಳ್ಳುತ್ತಿರುವವರು.
ಆದಿಚುಂಚನಗಿರಿ :-
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಹಾಗೂ ನಾಗಮಂಗಲದಿಂದ ಬೆಳ್ಳೂರು ಮಾರ್ಗ 20 km ದೂರದಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪ್ರಾಚೀನ ಶಾಸನಗಳಲ್ಲಿ ಈ ಊರಿಗೆ ಚುಂಚನಕೋಟೆ ,ಚುಂಚನ ಹಳ್ಳಿ, ಆದಿಚುಂಚನಗಿರಿ ಎಂದು ಹೆಸರಿರುವುದು ಉಲ್ಲೇಖವಿದೆ.
ಪುರಾಣ ಕಾಲದಲ್ಲಿ ಇಲ್ಲಿ ಚುಂಚ ಮತ್ತು ಕಂಚ ಎಂಬ ರಾಕ್ಷಸ ಸಹೋದರರು ಇದ್ದು ಜನರಿಗೆ ಉಪಟಳ ಕೊಡುತ್ತಿದ್ದ, ಕಾರಣ ಪರಶಿವನವರನ್ನು ಸಂಹಾರ ಮಾಡಿದನೆಂದು ಇಲ್ಲಿ ಪವಿತ್ರವಾದ ಜ್ವಾಲಾಪೀಠಕ್ಕೆ ಪರಶಿವನೆ ಆದಿ ಆದ್ದರಿಂದ ಹಾಗೂ ರಾಕ್ಷಸರಲ್ಲಿ ಚುಂಚನೆ ಅಣ್ಣನಾದುದರಿಂದ ಆದಿಚುಂಚನಗಿರಿ ಎಂದು ಹೆಸರಿಸಲಾಯಿತು ಎನ್ನಲಾಗಿದೆ.
ಚುಂಚು ಎಂದರೆ ಪಕ್ಷಿಯ ಕೊಕ್ಕು. ಗಿರಿ ನವಿಲುಗಳ ತವರೂರು. ಇಂದಿಗೂ ಇಲ್ಲಿ ನವಿಲುಗಳ ಸಮೃದ್ದೀ ಇದೆ. ನವಿಲುಗಲ ಚುಂಚು ಆಧಾರದ ಮೇಲೆ ಊರಿಗೆ ಚುಂಚನಗಿರಿ ಎಂದು ಹೆಸರಾಗಿರಬಹುದು, ಎಂಬ ಊಹೆ ಇದೆ. ಚುಂಚನಗಿಡ ಇಲ್ಲಿ ಬೆಳೆಯುತ್ತಿದ್ದು ಆದಿಚುಂಚನಗಿರಿ ಎಂದು ಹೆಸರು ಇರಬಹುದು.
ಇಲ್ಲಿ ದ್ರಾವಿಡ ಶೈಲಿಯ ಪ್ರಸಿದ್ಧ ಕಾಲಭೈರವೇಶ್ವರ ಗುಡಿ ಇದೆ. ಸಮೀಪದಲ್ಲಿ ತಗ್ಗಿನಲ್ಲಿರುವ ಕಂಬದಮ್ಮನ ಗುಡಿ ,ಚಂದ್ರಮೌಳೇಶ್ವರ, ಅನ್ನಪೂರ್ಣೇಶ್ವರಿ ಹಾಗೂ ಭೈರವನ ಹಳೆಯ ಗುಡಿಗಳಿವೆ.
ಜ್ವಾಲಾ ಪೀಠ ಇರುವ ಅನ್ನದಾನಿ ಮಠ ಮೇದರ ಮಂಟಪ, ಒಕ್ಕಲ್ಲುಬಸವ, ಗಂಗಾಧರೇಶ್ವರ ಹಾಗೂ ಪಾರ್ವತಿ ಗುಡಿಗಳು ಕಾಣಸಿಗುತ್ತದೆ. ಕಡಿದಾದ ಕಿರುಬಂಡೆಗಳ ನಡುವೆ ಹಾದು ಮೇಲೇರಿದಾಗ ಗವಿಸಿದ್ದೇಶ್ವರನ ಗುಹೆ ಕಂಡು ಬರುತ್ತದೆ ಸ್ವಲ್ಪ ಮೇಲೆ ಕಡಿದಾದ ಬಂಡೆಗಳನ್ನೇರಿದರೆ ಚೋಳೂರು ಕಂಬ ಕಾಣುತ್ತದೆ.
ಗಿರಿಯ ಉತ್ತರಕ್ಕೆ ಕಣಿವೆ ಹನುಮಂತನಿಂದಚೆಗೆ ಬೆಟ್ಟದ ಮಧ್ಯದಲ್ಲಿರುವ ಕೂಗು ಬಂಡೆ ವಿಶಿಷ್ಟವಾಗಿದೆ ನಿರ್ದಿಷ್ಟ ಜಾಗದಲ್ಲಿ ಹಾಕಿರುವ ಕಲ್ಲು ಗುಡ್ಡೆ ಮೇಲೆ ನಿಂತು ಮೇಲುದನಿಯಲ್ಲಿ ಮಾತನಾಡಿದರು ಮರ್ಧನಿಸುವ ಮೇದರಕಲ್ಲು ಚಕಿತಗೊಳಿಸುತ್ತದೆ. ಕೂಗು ಬಂಡೆಯಿಂದಾಚೆಗೆ ಬೇಲದ ಕೆರೆ ಮಾರ್ಗದ ನಾಗರಕಲ್ಲು, ಸಿಪ್ಪೆಸ್ವಾಮಿ ಗವಿ ನೋಡಬೇಕಾದ ತಾಣಗಳು. ಇಲ್ಲಿ ಒಕ್ಕಲಿಗ ಜನಾಂಗದ ಶ್ರೀ ಮಠವಾಗಿದೆ
ಆದಿಚುಂಚನಗಿರಿ ಪವಿತ್ರ ಕ್ಷೇತ್ರ, ಸಿದ್ಧ ತಪ್ಪೋಭೂಮಿ ಇಲ್ಲಿನ ದೇವಾಲಯಗಳಲ್ಲಿ ಶಾಸ್ತ್ರೋಕ್ತವಾಗಿ ನಿತ್ಯೋತ್ಸವ, ತೆಪ್ಪೋತ್ಸವ, ಮಾಸೋತ್ಸವ ಹಾಗೂ ವರ್ಷೋತ್ಸವಗಳು ಜರುಗುತ್ತದೆ. ಸ್ವಾಮೀಜಿ ಅವರು ಮಹಾನವಮಿ ಮಹಾಶಿವರಾತ್ರಿ ಮತ್ತು ರಥೋತ್ಸವಗಳಂದು ಸರ್ವಾಭರಣಭೂಷಿತರಾಗಿ ಆದಿಪೀಠದ ಮೇಲೆ ಆಸೀನರಾಗಿ ಭಕ್ತರಿಗೆ ದರ್ಶನ ನೀಡಿ ಮೇಲೆ ಸಿದ್ದಸಿಂಹಾಸನಾರೋಹಣ ಮಾಡುತ್ತಾರೆ. ಸಂಕ್ರಾಂತಿ ಕಾರ್ತಿಕ ಗುರುಪೂರ್ಣಿಮೆಗಳೆಂದು ಇಲ್ಲಿ ವಿಶೇಷ ಉತ್ಸವಗಳು ಜರುಗುತ್ತದೆ.
ಪ್ರತಿ ವರ್ಷ ಪಾಲ್ಗುಣ ಶುದ್ಧ ಸಪ್ತಮಿಯಿಂದ ಪಾಲ್ಗುಣ ಶುಕ್ಲ ಪೂರ್ಣಿಮಾ ಅವರಿಗೆ ಒಂಬತ್ತು ದಿನಗಳ ಕಾಲ ಇಲ್ಲಿ ಜರಗುವ ಗಂಗಾಧರೇಶ್ವರ ಮತ್ತು ಕಾಲಭೈರವೇಶ್ವರ ಸ್ವಾಮಿ ವಾರ್ಷಿಕ ಜಾತ್ರೆ ಅಮೋಘ, ಭೈರವನ ಪರಿಚಯ ಎಂದು ಇದಕ್ಕೆ ಹೆಸರಿದೆ
ಪ್ರಸ್ತುತ ದೇವಾಲಯ ಜೀರ್ಣೋದ್ಧಾರವಾಗಿದ್ದು ವಿನೂತನವಾಗಿ ಕಂಗೊಳಿಸುತ್ತಿವೆ.