ಮನೆ ಸುದ್ದಿ ಜಾಲ ಸಾವಿತ್ರಿ ಬಾಯಿ ಫುಲೆ ಆದರ್ಶ ಮಹಿಳೆ: ಸುನಂದಾ ಪಾಲನೇತ್ರ

ಸಾವಿತ್ರಿ ಬಾಯಿ ಫುಲೆ ಆದರ್ಶ ಮಹಿಳೆ: ಸುನಂದಾ ಪಾಲನೇತ್ರ

0

ಮೈಸೂರು(Mysuru): ಮಹಿಳೆಯರು ಸಮಾನತೆಯಿಂದ ಎಲ್ಲಾ ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಬಂದಿದ್ದಾರೆ. ಇದಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಸ್ಮರಣೀಯ ಎಂದು ಮಾಜಿ ಮಹಾಪೌರರಾದ ಸುನಂದಾ ಪಾಲನೇತ್ರ ಹೇಳಿದರು.

ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ಅಂಗವಾಗಿ ಕೃಷ್ಣರಾಜ ಯುವ ಬಳಗ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಕೆಳವರ್ಗದ ಸಮುದಾಯದವರು ವಿದ್ಯಾಭ್ಯಾಸ ಪಡೆದು ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಮಾತನಾಡಿ, ಆಧುನಿಕ ಭಾರತದ ಮೊದಲ ಶಿಕ್ಷಕಿ, ಜಾತಿ, ಧರ್ಮ, ವರ್ಗ, ಭೇದಭಾವ ಮಾಡದೆ ಸಮಾನ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿಯವರ ಆದರ್ಶ ಎಲ್ಲರಿಗೂ ಮಾದರಿ ಎಂದರು.

ಶಿಕ್ಷಕಿಯಾಗಿ ಸಾಕಷ್ಟು ಅವಮಾನಗಳನ್ನು ಮೆಟ್ಟಿ ನಿಂತವರು ಸಾವಿತ್ರಿಬಾಯಿ ಅವರ ಜೀವನಗಾಥೆ ವಿದ್ಯಾರ್ಥಿಗಳಿಗೂ ಸ್ಪೂರ್ತಿ ಎಂದು ಹೇಳಿದರು.

ನಂತರ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರಾದ ಕಡಕೊಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮತಿ ಎಚ್ ಎ, ಗೋಪಾಲಪುರ ಶಾಲೆಯ ನಿವೃತ್ತ ಶಿಕ್ಷಕಿಯಾದ ಎಸ್. ಮಂಜುಳಾ, ಮಳವಳ್ಳಿ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಎನ್. ವಿಶಾಲಕ್ಷಮ್ಮ, ಅಕ್ಕನ ಬಳಗ ಶಾಲೆಯ ಮುಖ್ಯ ಶಿಕ್ಷಕಿ ಸುಗುಣ, ದಳವಾಯಿ ಪ್ರೌಢಶಾಲೆಯ  ಕಾವ್ಯಶ್ರೀ ಕೆ ಎಂ, ಶ್ರೀ ಜಯಲಕ್ಷ್ಮಿ ವಿಳಾಸ ಬಾಲಕ ಪಾಠಶಾಲೆಯ ಸುನಿತಾ ಆರ್, ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯ ಶಿವಮ್ಮ, ಶ್ರೀ ಕೃಷ್ಣ ಲಲಿತ ಕಲಾಮಂದಿರದ ಸಮಶ್ರೀ , ಅಕ್ಕನ ಬಳಗ ಶಾಲೆಯ ನಾಗರತ್ನ, ಮೈಸೂರು ವಿಶ್ವವಿದ್ಯಾಲಯದ ಡಾ. ರಮ್ಯ ವೈ ಎನ್ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮ ಪ್ರಾರಂಭದ ಮುನ್ನ ನಮ್ಮನ್ನು ಅಗಲಿದ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ರವರಿಗೆ ಸಂತಾಪ ಸಲ್ಲಿಸಿ ನಂತರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡಿಕೆರೆ ಗೋಪಾಲ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಲಾಯರ್ ಅಸೋಸಿಯೇಷನ್ ಕಾರ್ಯದರ್ಶಿ ಉಮೇಶ್, ಸವಿತಾ ಘಾಟ್ಕ, ಕೃಷ್ಣರಾಜ ಯುವ ಬಳಗದ ಅಧ್ಯಕ್ಷರಾದ ನವೀನ್ ಕೆಂಪಿ, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷರಾದ ಚೇತನ್ ಕಾಂತರಾಜು, ಸುರೇಶ್ ಗೋಲ್ಡ್, ವಿನಯ್ ಕಣಗಾಲ್, ಹಾಗೂ ಇನ್ನಿತರರು ಹಾಜರಿದ್ದರು.

ಹಿಂದಿನ ಲೇಖನಮೈಸೂರು: ಯುವತಿಯ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾದ ಫೇಸ್’ಬುಕ್ ಗೆಳೆಯ
ಮುಂದಿನ ಲೇಖನಸಾಧ್ಯತೆಯಿಂದ ಸಾಧನೆಯೆಡೆಗೆ