ಮನೆ ರಾಜ್ಯ ಅಧಿಕ ಬಡ್ಡಿ ನೀಡುವ ಎಸ್​ ಬಿಐ ಅಮೃತ್ ಕಳಶ್ ಸ್ಕೀಮ್ ಮಾರ್ಚ್ 31ಕ್ಕೆ ಕೊನೆ

ಅಧಿಕ ಬಡ್ಡಿ ನೀಡುವ ಎಸ್​ ಬಿಐ ಅಮೃತ್ ಕಳಶ್ ಸ್ಕೀಮ್ ಮಾರ್ಚ್ 31ಕ್ಕೆ ಕೊನೆ

0

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ ಮಾಡಿರುವ ಹಲವು ಠೇವಣಿ ಯೋಜನೆಗಳಲ್ಲಿ ಅಮೃತ್ ಕಳಶ್ ಸ್ಪೆಷಲ್ ಎಫ್ ​ಡಿ ಸ್ಕೀಮ್ ಪ್ರಮುಖವಾದುದು. ರೆಗ್ಯುಲರ್ ಡೆಪಾಸಿಟ್​ಗಳಿಗಿಂತ ಅಮೃತ್ ಕಳಶ್ ಪ್ಲಾನ್​ ನಲ್ಲಿ ಹೆಚ್ಚು ಬಡ್ಡಿ ಕೊಡಲಾಗುತ್ತದೆ.

Join Our Whatsapp Group

ಈ ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಮಾರ್ಚ್ 31ರವರೆಗೆ ಲಭ್ಯ ಇರುತ್ತದೆ. 2023ರ ಏಪ್ರಿಲ್ 12ರಂದು ಆರಂಭಗೊಂಡ ಈ ಪ್ಲಾನ್​ ನ ಡೆಡ್ ​ಲೈನ್ ಅನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಇದೀಗ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಶ್ಚಿತ ಠೇವಣಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7.1, ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ.

ಎಸ್ ​ಬಿಐ ಅಮೃತ್ ಕಳಶ್ ಯೋಜನೆಯಲ್ಲಿ ನಿಶ್ಚಿತ ಠೇವಣಿ 400 ದಿನದ ಅವಧಿಯದ್ದಾಗಿರುತ್ತದೆ. ಇದರ ಮೇಲಿನ ಬಡ್ಡಿ ಹಣವನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ, ಅಥವಾ ಅರ್ಧವಾರ್ಷಿಕವಾಗಿ ಪಡೆಯಬಹುದು.

ಎಸ್​ ಬಿಐನ ಬೇರೆ ಠೇವಣಿಗಳಿಗೆ ಶೇ. 3.5ರಿಂದ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಬರುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಎರಡು ವರ್ಷದಿಂದ ಮೂರು ವರ್ಷದವರೆಗಿನ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇದು ಎಸ್ ​ಬಿಐನ ರೆಗ್ಯುಲರ್ ಡೆಪಾಸಿಟ್ ಯೋಜನೆಗಳಲ್ಲೇ ಗರಿಷ್ಠವೆನಿಸಿದೆ.

ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ವೀ ಕೇರ್ ಡೆಪಾಸಿಟ್ ಸ್ಕೀಮ್ ​ನಲ್ಲಿ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಸರ್ವೋತ್ತಮ್ ಸ್ಕೀಮ್ ​ನಲ್ಲಿ ಎರಡು ವರ್ಷದ ಠೇವಣಿಗೆ ಶೇ. 7.4ರಷ್ಟು ಬಡ್ಡಿ ಆಫರ್ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಶೇ. 7.9ರಷ್ಟು ಆದಾಯ ಬರುತ್ತದೆ.

ಎಸ್ ​ಬಿಐನ ರೆಗ್ಯುಲರ್ ಡೆಪಾಸಿಟ್ ​ಗಳಿಗೆ ಇರುವ ದರ (ಸಾಮಾನ್ಯ ಗ್ರಾಹಕರಿಗೆ)

45 ದಿನಗಳವರೆಗಿನ ಠೇವಣಿ: ಶೇ. 3.5 ಬಡ್ಡಿ

46 ದಿನದಿಂದ 179 ದಿನಗಳವರೆಗೆ: ಶೇ. 4.75

180 ದಿನದಿಂದ 210 ದಿನದವರೆಗೆ: ಶೇ. 5.75

211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಶೇ. 6

ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಶೇ. 6.8

ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಶೇ. 7

ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಶೇ. 6.75

ಐದು ವರ್ಷದಿಂದ 10 ವರ್ಷದವರೆಗೆ: ಶೇ. 6.5 ಬಡ್ಡಿ

400 ದಿನಗಳ ಠೇವಣಿಯು ಅಮೃತ್ ಕಳಶ್ ಪ್ಲಾನ್ ಅಡಿಯಲ್ಲಿ ಬರುತ್ತದೆ. ಇದಕ್ಕೆ ಶೇ. 7.1ರಷ್ಟು ಬಡ್ಡಿ ಇದೆ. ಈ ಎಲ್ಲಾ ವಿಶೇಷ ಮತ್ತು ರೆಗ್ಯುಲರ್ ಡೆಪಾಸಿಟ್ ಪ್ಲಾನ್ ​ಗಳಲ್ಲಿ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚಿಗೆ ಬಡ್ಡಿ ಸಿಗುತ್ತದೆ.