ಮನೆ ಉದ್ಯೋಗ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಎಸ್’ಬಿಐನಿಂದ ಅರ್ಜಿ ಆಹ್ವಾನ

ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಎಸ್’ಬಿಐನಿಂದ ಅರ್ಜಿ ಆಹ್ವಾನ

0


ದೇಶದ ಪ್ರತಿಷ್ಟಿತ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಕಾತಿಗೆ ಮುಂದಾಗಿದೆ. ಖಾಲಿ ಇರುವ ಮ್ಯಾನೇಜರ್​ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿವುಳ್ಳ, ಅರ್ಹ ಅಭ್ಯರ್ಥಿಗಳು ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ತಿಂಗಳು 12ನೇ ತಾರೀಖಿನೊಳಗೆ ಆನ್​ ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.


ಯಾವ ಯಾವ ಹುದ್ದೆಗಳಿಗೆ ನೇಮಕಾತಿ?
ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) –- 55 ಹುದ್ದೆಗಳು
ಮ್ಯಾನೇಜರ್ (ಪ್ರಾಜೆಕ್ಟ್​ ಡಿಜಿಟಲ್ ಪಾವತಿಗಳು) – 5
ಮ್ಯಾನೇಜರ್​ (ಪ್ರಾಡೆಕ್ಟ್​ ಡಿಜಿಟಲ್ ಪ್ಲಾಟ್‌ ಫಾರ್ಮ್‌’ಗಳು) – 2
ವಿದ್ಯಾರ್ಹತೆ
MBA/ MMS (ಹಣಕಾಸು)/ PGDBA/ PGDBM/ CA/ CFA/ ICWA ಪದವಿ ಹೊಂದಿರಬೇಕು
ವಯೋಮಿತಿ ಸಡಿಲಿಕೆ
ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಅವಕಾಶವಿದೆ.
ಅರ್ಜಿ ಸಲ್ಲಿಕೆ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು : 750 ರೂ.
SC/ST  ಅಭ್ಯರ್ಥಿಗಳು: ಶುಲ್ಕ ಇಲ್ಲ
ಇವುಗಳನ್ನು ಮರೆಯದಿರಿ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.