ಮನೆ ರಾಜ್ಯ ಎಸ್.ಸಿ ಒಳಮೀಸಲಾತಿ ಸಮೀಕ್ಷೆ ಪ್ರಕ್ರಿಯೆ ಪ್ರಶ್ನೆಗೆ ಗುರಿ: ಹಚ್. ಆಂಜನೇಯ ತೀವ್ರ ಅಸಮಾಧಾನ

ಎಸ್.ಸಿ ಒಳಮೀಸಲಾತಿ ಸಮೀಕ್ಷೆ ಪ್ರಕ್ರಿಯೆ ಪ್ರಶ್ನೆಗೆ ಗುರಿ: ಹಚ್. ಆಂಜನೇಯ ತೀವ್ರ ಅಸಮಾಧಾನ

0

ಬೆಂಗಳೂರು: ರಾಜ್ಯ ಸರ್ಕಾರ ಎಸ್.ಸಿ ಒಳಮೀಸಲಾತಿ ಸಮೀಕ್ಷೆ ಆರಂಭಿಸಿದ್ದು ಈಗಾಗಲೇ ಈ ಸಮೀಕ್ಷೆ ನಡೆಸುತ್ತಿರುವ ರೀತಿಯ ಬಗ್ಗೆ ಹಲವಾರು ಟೀಕೆ ಟಿಪ್ಪಣಿಗಳು ಕೇಳಿಬಂದಿವೆ.ಈ ಮಧ್ಯೆ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗೂ ಕೆಲ ಸವಾಲುಗಳು ಎದುರಾಗಿದ್ದು ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಹೆಚ್.ಆಂಜನೇಯ ಬೆಂಗಳೂರಿನ ಅಪಾರ್ಟ್ಮೆಂಟ್ ಗಳು,ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸಿಸುವವರು,ತಮ್ಮ ಜಾತಿಯ ಹೆಸರನ್ನೂ ಹೇಳುವುದಿಲ್ಲ ಮತ್ತು ಸಮೀಕ್ಷೆ ನಡೆಸಲು ಬರುವ ಸಿಬ್ಬಂದಿಯನ್ನು ಒಳಗೆ ಬಿಟ್ಟುಕೊಳ್ಳಲ್ಲ ಎಂದಿದ್ದಾರೆ.

ಇದೇ ವೇಳೆ ಸರ್ವೆ ಮಾಡದೇ ಗೋಡೆಗೆ ಸ್ಟಿಕ್ಕರ್ ಅಂಟಿಸೋದು ಸರಿಯಲ್ಲ ಎಂದ ಆಂಜನೇಯ,ಸರಿಯಾಗಿ ಸರ್ವೆ ಮಾಡಿದ್ಮೇಲೆ ಸ್ಟಿಕ್ಕರ್ ಹಾಕಬೇಕಿತ್ತು.ಅದುಬಿಟ್ಟು ಸಾಮೂಹಿಕವಾಗಿ ಸ್ಟಿಕ್ಕರ್ ಹಾಕಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ 6ಕ್ಕೆ ಒಳಮೀಸಲಾತಿ ಸರ್ವೆ ಮುಗಿಯಬೇಕು.ಈ ತಿಂಗಳ ಒಳಗೆ ಒಳಮೀಸಲಾತಿ ಜಾರಿ ಆಗಬೇಕು ಅಂತ ಹೆಚ್.ಆಂಜನೇಯ ಆಗ್ರಹಿಸಿದ್ದಾರೆ.