ಮೈಸೂರು: 2005 ರಿಂದ 2010-2011ನೇ ಸಾಲಿನವರೆಗೆ ವಿವಿಯಲ್ಲಿ ಕರ್ತವ್ಯ ನಿರ್ವಹಿಸಿದ ದಲಿತ ಹಿಂದುಳಿದ ನೌಕರರ ಮೇಲೆ ಆಗಿರುವ ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ಪರಿಶಿಷ್ಟ ಜಾತಿ ಮತ್ತು ಪಂಗಡದ ದಿನಗೂಲಿ ನೌಕರರ ಸಂಘ ತೀರ್ಮಾನಿಸಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 228 ಮಂದಿ ದಿನಗೂಲಿ/ ಗುತ್ತಿಗೆ / ತಾತ್ಕಾಲಿಕ ನೌಕರರು 2005 ರಲ್ಲಿ ನಿರಂತರ ಮುಷ್ಕರ ಸಮಯದಲ್ಲಿ ವಿ.ವಿ ಯಲ್ಲಿ ಖಾಲಿ ಇರುವ 545 ವಿವಿಧ ಹುದ್ದೆಗಳಿಗೆ ಎದುರಾಗಿ 132 ಮಂದಿ ನೌಕರರನ್ನು ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಂಡು 2010-11ನೇ ಸಾಲಿನವರೆಗೆ ವಿ.ವಿ ಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇವರಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರು ಹೆಚ್ಚಾಗಿದ್ದ ಕಾರಣದಿಂದ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಹಿಂದೆ ಇದ್ದಂತಹ ವ್ಯವಸ್ಥಾಪನಾ ಮಂಡಳಿಯವರು ವಿವಿ ಯಲ್ಲಿ ಹಣ ದೋಚುವುದಲ್ಲದೆ ದಲಿತ ನೌಕರರ ಮೇಲೆ ದೌರ್ಜನ್ಯ ಹಾಗೂ ಅನ್ಯಾಯ ಮಾಡಿರುತ್ತಾರೆ. ವಿಶ್ವವಿದ್ಯಾನಿಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವವರ ಪರ ನ್ಯಾಯಾಲಯದ ಆದೇಶವಾಗಿದ್ದರು ಸಹ ನ್ಯಾಯ ದೊರಕಿಸದೇ ಅನ್ಯಾಯ ಎಸಗಿರುತ್ತಾರೆ.17-8-2024 ರಂದು ನಡೆದ 179 ನೇ ವ್ಯವಸ್ಥಾಪನಾ ಮಂಡಳಿ ತೀರ್ಮಾನವೇ ಕಾನೂನು ಪಾಲಿಸದಿರುವುದಕ್ಕೆ ಉದಾಹರಣೆಯಾಗಿದೆ.
ಇನ್ನಾದರೂ ಎಚ್ಚೆತ್ತುಕೊಂಡು ನ್ಯಾಯ ದೊರಕಿಸಿ ಸಮಾಜದಲ್ಲಿ ದಲಿತ ನೌಕರರಿಗೂ ಪರಿಪೂರ್ಣವಾಗಿ ಬದುಕಲು ಅವಕಾಶ ಮಾಡಿಕೊಡಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಒಳಗೊಂಡಂತೆ ಎಲ್ಲರೂ ಒಟ್ಟಾಗಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ವಿ.ವಿ ಮುಂದೆ ಹೂಡಲು ಸಚ್ಚಾಗಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.