ಮನೆ ರಾಜ್ಯ ರಾಜ್ಯದ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಡಿಬಿಡಿ ಮೂಲಕ ವಿದ್ಯಾರ್ಥಿ ವೇತನ ಪಾವತಿ

ರಾಜ್ಯದ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಡಿಬಿಡಿ ಮೂಲಕ ವಿದ್ಯಾರ್ಥಿ ವೇತನ ಪಾವತಿ

0

ಬೆಂಗಳೂರು: 2024-25ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಆರ್ಥಿಕವಾಗಿ ಹಿಂದುಳಿದ ಆರ್ಯ ವೈಶ್ಯ ಸಮುದಾಯದ 1893 ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿದ ಕಂದಾಯ ಸಚಿವರು ಹಾಗೂ ನಿಗಮದ ಅಧ್ಯಕ್ಷರು ಕೃಷ್ಣ ಬೈರೇಗೌಡ ಆದೇಶಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದಿರುವ ಬಡ ಆರ್ಯ ವೈಶ್ಯ 1893 ವಿದ್ಯಾರ್ಥಿಗಳಿಗೆ ರೂ.2.80 ಕೋಟಿಗಳ ವೆಚ್ಚದಲ್ಲಿ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಿ ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆಗೊಳಿಸಲಾಗಿದೆ ಎಂದು ಕಂದಾಯ ಸಚಿವರು ಹಾಗೂ ನಿಗಮದ ಅಧ್ಯಕ್ಷರು ಕೃಷ್ಣ ಬೈರೇಗೌಡ ರವರು ಬುಧವಾರ ವಿಕಾಸ ಸೌಧದ ಕಛೇರಿಯಲ್ಲಿ ತಿಳಿಸಿದರು.

ಇಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಆರ್ಯ ವೈಶ್ಯ ಸಮುದಾಯದ 1893 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಅವರಲ್ಲಿ ಪದವಿ ಪೂರ್ವ (ಪಿಯುಸಿ), ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ 1,006 ವಿದ್ಯಾರ್ಥಿಗಳಿಗೆ ರೂ. 57.98 ಲಕ್ಷಗಳು, ವೈದ್ಯಕೀಯ, ದಂತ ವೈದ್ಯಕೀಯ, ಅಭಿಯಂತರ ಮತ್ತು ಇತರೆ ವೃತ್ತಿಪರ ಸ್ನಾತ್ತಕೋತ್ತರ ಪದವಿದಾರರಿಗೆ ಗರಿಷ್ಠ ರೂ.1.20 ಲಕ್ಷಗಳ ವರೆಗೆ ವಿದ್ಯಾರ್ಥಿ ವೇತನ, ನಿಗಮದಿಂದ 887 ವಿದ್ಯಾರ್ಥಿಗಳಿಗೆ 2.23 ಕೋಟಿಗಳನ್ನು ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದರು.

“ಆರ್ಥಿಕವಾಗಿ ಹಿಂದುಳಿದಿರುವ ಆರ್ಯ ವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆರ್ಯ ವೈಶ್ಯ ನಿಗಮದ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜಕ್ಕೆ ಬೆಳಕಾಗಬೇಕು” ಎಂದು ಅವರು ಹಾರೈಸಿದರು.