ಮನೆ ರಾಜಕೀಯ ಎಸ್‌ ಡಿಎ ರುದ್ರಣ್ಣ ಮೊಬೈಲ್‌ ಪತ್ತೆ: ಪೊಲೀಸರಿಂದ ತನಿಖೆ ಚುರುಕು

ಎಸ್‌ ಡಿಎ ರುದ್ರಣ್ಣ ಮೊಬೈಲ್‌ ಪತ್ತೆ: ಪೊಲೀಸರಿಂದ ತನಿಖೆ ಚುರುಕು

0

ಬೆಳಗಾವಿ: ತಹಶೀಲ್ದಾರ್‌ ಕಚೇರಿಯಲ್ಲೇ ಎಸ್‌ಡಿಎ ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಮನೆಯಲ್ಲಿ ಇಟ್ಟು ಹೋಗಿದ್ದ ರುದ್ರಣ್ಣ ಮೊಬೈಲ್‌ ಪತ್ತೆಯಾಗಿದ್ದು, ಕರೆಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

Join Our Whatsapp Group

ತಹಶೀಲ್ದಾರ್‌ ಕಚೇರಿಯಲ್ಲಿ ಅಳವಡಿಸಿರುವ ಸಿಸಿ ಕೆಮೆರಾಗಳ ದೃಶ್ಯಗಳನ್ನು ಮಂಗಳವಾರ ರಾತ್ರಿಯವರೆಗೂ ಪೊಲೀಸರು ಕಲೆ ಹಾಕಿದ್ದಾರೆ. ಮಂಗಳವಾರ ಬೆಳಗ್ಗೆ 6.38ಕ್ಕೆ ರುದ್ರಣ್ಣ ಕಚೇರಿಗೆ ಬಂದಿರುವುದು ಸೆರೆಯಾಗಿದೆ.

ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗುತ್ತಿದ್ದಂತೆ ತಹಶೀಲ್ದಾರ್‌ ಬಸವರಾಜ ನಾಗರಾಳ ಕಚೇರಿಗೆ ಬಂದು ನೋಡಿ ಹೋದವರು ಅನಂತರ ತಲೆಮರೆಸಿಕೊಂಡಿದ್ದಾರೆ. ಬುಧವಾರ ಸಂಜೆ ತಹಶೀಲ್ದಾರ್‌ ಕಚೇರಿ ಬಳಿ ವಾಹನ ನಿಂತಿದೆ. ಸಚಿವರ ಆಪ್ತ ಸಹಾಯಕ ಸೋಮು ದೊಡವಾಡಿ ಹಾಗೂ ಅಶೋಕ ಕಬ್ಬಿಲಿಗೇರ ಕೂಡ ನಾಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮುನ್ನ ದಿನ ರುದ್ರಣ್ಣ ಕಚೇರಿಯ ಎಲ್ಲ ಸಿಬಂದಿ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿಯೇ ಡೆತ್‌ನೋಟ್‌ ಕಳುಹಿಸಿ, ಕೆಲವು ಸಹೋದ್ಯೋಗಿಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಆತ್ಮಹತ್ಯೆಯ ಸುಳಿವು ಕೊಟ್ಟಿದ್ದರು ಎನ್ನಲಾಗಿದೆ.

ಎಸ್‌ ಡಿಎ ಆತ್ಮಹತ್ಯೆ ಕುರಿತು ಸಮಗ್ರ ತನಿಖೆ: ಡಿಕೆಶಿ

ಬೆಳಗಾವಿ ತಹಶೀಲ್ದಾರ್‌ ಕಚೇರಿ ಸಿಬಂದಿ ಆತ್ಮಹತ್ಯೆ ಪ್ರಕರಣ ಕುರಿತು ಕಾನೂನು ಪ್ರಕಾರ ಸಮಗ್ರ ತನಿಖೆ ನಡೆಸಲಾಗುವುದು. ಯಾರ ಹೆಸರು ಉಲ್ಲೇಖ ಮಾಡಿದ್ದರೂ ಅದರ ಬಗ್ಗೆಯೂ ತನಿಖೆಯಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಇಂತಹ ಘಟನೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳಲ್ಲ ಎಂದರು. ಮುಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತದ ನೋಟಿಸ್‌ಗೆ ಗೌರವ ಕೊಟ್ಟು ಸಿಎಂ ವಿಚಾರಣೆಗೆ ಹಾಜರಾಗಿದ್ದಾರೆ. ಕಾನೂನಿಗೆ ಗೌರವ ಕೊಡುವಂತಹ ನಮ್ಮ ಮುಖ್ಯಮಂತ್ರಿ ಎಂದು ಖುಷಿ ಪಡಬೇಕು. ಕೇವಲ ಎರಡು ಗಂಟೆ ವಿಚಾರಣೆ ಮಾಡಿದ್ದಾರೆ ಎಂದವರು ಹೇಳಿದರು.