3. ಧಾರಣಾ ಶಕ್ತಿ ಮುದ್ರೆ :- ಪ್ರಾಣಾಯಾಮ ಮಾಡುತ್ತಿರುವಾಗ ಹೆಬ್ಬೆರಳ ಮೇಲ್ಭಾಗದಲ್ಲಿ ತೋರುಬೆರಳ ತುದಿಯಿಂದ ಒತ್ತಿ ಹಿಡಿದರೆ ನಿರಾಶಾಯವಾಗಿ ಕುಂಭಕದ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು. ಅದೇ ರೀತಿ ಹೆಬ್ಬೆರಳಿನ ಮಧ್ಯಭಾಗವನ್ನು ಒತ್ತಿ ಹಿಡಿದರೆ ವಾಯುಧಾರಣೆ ಇನ್ನೂ ಹೆಚ್ಚು, ಹಾಗೆ ಹೆಬ್ಬರಳಿನ ಬುಡವನ್ನು ಹೊತ್ತು ಹಿಡಿದರೆ ಹೆಚ್ಚಿನ ಗರಿಷ್ಠ ಪ್ರಮಾಣದ ವಾಯುಧಾರಣೆ ಸಾದ್ಯ. ತನ್ಮೂಲಕ ಆಯುಷ್ಯ ವೃದ್ಧಿ ಸಾದ್ಯ.
4. ಷಣ್ಮುಖೀ ಮುದ್ರೆ :- ಎರಡು ಮೊಣ ಕೈಗಳನ್ನು ಎರಡೂ ಪಕ್ಕಗಳ ಭುಜಗಳ ನೇರಕ್ಕೆ ಎತ್ತಿ ಹಿಡಿದು, ಕಿವಿಗಳ ಮಧ್ಯಭಾಗದಲ್ಲಿ ಕೋಡಿನಂತೆ ಕಾಣಿಸುವ ಭಾಗವನ್ನು ಹೆಬ್ಬೆರಳುಗಳಿಂದ ಕಿವಿಯ ರಂದ್ರಗಳ ಮೇಲೆ ಯಾವುದೇ ಶಬ್ದವನ್ನು ಆಲಿಸಲು ಸಾಧ್ಯವಾಗದಂತೆ, ಒತ್ತಿಹಿಡಿದು ಯಾವುದೂ ಕಾಣಿಸದಂತೆ ಕಣ್ಣುಮುಚ್ಚಿಕೊಂಡು ತೋರುಬೆರಳು ಹಾಗೂ ಮಧ್ಯದ ಬೆರಳುಗಳನ್ನು ಕಣ್ಣಿನ ರೆಪ್ಪೆಗಳ ಮೆರಿಸಿಕೊಳ್ಳಿ ಮತ್ತು ಅನಾಮಿಕ ಅಥವಾ ಉಂಗುರ ಬೆರಳುಗಳು ಮೂಗಿನ ಹೊಳ್ಳೆಯನ್ನು ಮೃದುವಾಗಿ ಸ್ಪರ್ಶಿಸಲಿ, ಕಿರುಬೆರಳು ಅದರ ಕೆಳಗಿರುವ ಬಾಯಿಯ ಮೇಲೆ ಮೃದುವಾಗಿ ಒರಗಿರಲಿ. ಇದು ಷಣ್ಮುಖೀ ಮುದ್ರೆ.
5. ಆದಿಮುದ್ರೆ ಮತ್ತು ಬ್ರಹ್ಮಮುದ್ರೆ :-ಎರಡೂ ಕೈಗಳ ಹೆಬ್ಬೆರಳುಗಳನ್ನು, ಕಿರುಬೆರಳಿನ ಬುಡದವರೆಗೆ ಮಡಿಸಿ ಅದರ ಮೇಲೆ ಉಳಿದ ನಾಲ್ಕು ಬೆರಳುಗಳನ್ನು ಮಡಚಿಕೊಂಡು ಮುಷ್ಟಿ ಮಾಡಿಕೊಂಡು, (ಇದು ಆದಿಮುದ್ರೆ) ಎರಡೂ ಕೈಗಳ ಕಿರುಬೆರಳುಗಳು ನಾಭಿಯನ್ನು ಸ್ಪರ್ಶಿಸುವಂತೆ ಮತ್ತು ಬೆರಳುಗಳ ಮಣಿಕಟ್ಟುಗಳ ಒಂದಕ್ಕೊಂದು ಎದುರು-ಬದುರಾಗಿತಾಗುವಂತೆ ಅಂಗೈಗಳು ಮೇಲ್ಮುಖವಾಗಿರುವಂತೆ, ಮುಷ್ಟಿಗಳನ್ನು ನಾವಿಗೆ ಹೊತ್ತಿಕೊಳ್ಳುತ್ತಾ ಇರುವುದು (ಇದು ಬ್ರಹ್ಮಮುದ್ರೆ). ಇವುಗಳನ್ನು ಮಂಡೂಕಾಸನ ಮಾಡುವಾಗ ಆಚರಿಸಬೇಕಾಗುತ್ತದೆ.
6. ಶೂನ್ಯ ಮುದ್ರೆ :-ಮಧ್ಯದ ಬೆರಳ ತುದಿಯನ್ನು ಹೆಬ್ಬೆರಳ ಬುಡದಲ್ಲಿರಿಸಿ, ಹೆಬ್ಬೆರಳಿನಿಂದ ಹಗುರವಾಗಿ ಒತ್ತಡ ನೀಡಿ. ಉಳಿದ ಬೆರಳು ನೇರವಾಗಿರಲಿ. ಇದನ್ನು ಮಾಡಿದ ತಕ್ಷಣಕ್ಕೇ ಪ್ರಾಣಮುದ್ರೆ ಕಡ್ಡಾಯವಿಲ್ಲ. ಕಿವಿಯ ಸಮಸ್ಯೆಗಳು-ಕಿವಿನೋವು (ಶಬ್ದ ಕೇಳಿಸುವುದು) ಕಿವುಡುತನ, ತಲೆ ತಿರುಗುವಿಕೆ (vertigo-ಚಕ್ರ ಬರುವುದು) ಇತ್ಯಾದಿಗಳಿಗೆ ಉತ್ತಮ. ಹಲ್ಲುನೋವು ಕಡಿಮೆ, ಒಸಡುಗಳು ಗಟ್ಟಿ, ಹೃದಯ ರೋಗ, ಮೂಳೆಗಳ ದೌರ್ಬಲ್ಯ, ಕ್ಯಾಲ್ಸಿಯಂ ನ್ಯೂನತೆ ಸರಿಪಡಿಸುತ್ತದೆ. ಗಂಟಲು ರೋಗ ಥೈರಾಯಿಡ್ ಗಳಿಗೆ ಪ್ರಯೋಜನಕಾರಿ. ದೀರ್ಘಕಾಲಿಕ ಸಮಸ್ಯೆಗಳಿಗೆ 40-60 ನಿಮಿಷದ ಅಭ್ಯಾಸ ಅವಶ್ಯ. ಆದರೆ ಜನ್ಮತಃ ಕಿವುಡರಿಗೆ ಇದು ಪ್ರಯೋಜನವಿಲ್ಲ.
ತೋರುಬೆರಳ ತುದಿಯನ್ನು ಹೆಬ್ಬೆರಳ ಬುಡದಲ್ಲಿರಿಸಿ, ಹೆಬ್ಬೆರಳಿನಿಂದ ಹಗುರವಾಗಿ ಒತ್ತಡ ಹಾಕಿ ಉಳಿದ ಮೂರು ಬೆರಳು ನೇರವಾಗಿರಲಿ, ದೇಹದಲ್ಲಿನ ಎಲ್ಲಾ ಪಂಚಪ್ರಾಣ ವಾಯುಗಳ ಮತ್ತು ಉಪ-ಪ್ರಾಣವಾಯುಗಳ ಚಟುವಟಿಕೆಗಳನ್ನು ಈ ಮುದ್ರೆ ನಿಯಂತ್ರಿಸುತ್ತದೆ. ದೇಹದ ಹೆಚ್ಚಿನ ವಾಯುವನು ಹೊರಹಾಕುತ್ತದೆ. ಮನದ ಏಕಾಗ್ರತೆ ಕೂಡ ಸಾಧನೆ ಆಗುತ್ತದೆ. ವಾಯು (ವಾತ=ಗ್ಯಾಸ್) ಸಂಬಂಧಿ ದೋಷಗಳು ಅರ್ಥರೈಟಿಸ್, ರುಮ್ಯಾಟಿಜಮ್, ಸರ್ವಿಕಲ್ಸ್ ಸ್ಪಾಂಡಿಲೋಸಿಸ್, ಕುತ್ತಿಗೆ, ಬೆನ್ನು ನೋವುಗಳು, ಮಂಡಿ ನೋವು, ಎಲ್ಲಾ ರೀತಿಯ ಪಕ್ಷಘಾತಗಳು, ಸ್ನಾಯು ಸೆಳೆತ, ಪಾರ್ಕಿನ್ಸನ್, ರೋಗ ಮತ್ತು ರಕ್ತ ಪರಿಚಲನೆಯ ಸಮಸ್ಯೆಗಳಿಗೆ ಇದು ಉತ್ತಮ ಫಲಿತಾಂಶ ನೀಡುತ್ತದೆ. ದಿನ ಪ್ರತಿ 40-45 ನಿಮಿಷಗಳ ಸತತ ಅಭ್ಯಾಸ ಮಾಡುವುದರಿಂದ ಈ ಸಮಸ್ಯೆಗಳು ಖಂಡಿತ ವಾಸಿಯಾಗುತ್ತದೆ.
ವಿಶೇಷ ಸೂಚನೆ :- ಈ ಮುದ್ರೆಯನ್ನು ದೇಹದ ತೊಂದರೆಗಳು ವಾಸಿಯಾಗುವವರೆಗೆ ಮಾತ್ರ ಅಭ್ಯಸಿಸಬೇಕು. ನಂತರ ನಿಲ್ಲಿಸಬೇಕು.
8. ಆಕಾಶ ಮುದ್ರೆ :- ಮಧ್ಯದ ಬೆರಳ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಕಿಸುವುದು. ಉಳಿದ ಬೆರಳುಗಳು ನೇರವಾಗಿರಬೇಕು. (ಎಚ್ಚರಿಕೆ : ಈ ಮುದ್ರೆಯನ್ನು ಅವಶ್ಯಕತೆ ಇದ್ದಾಗ ಮಾತ್ರ. ಅಂದರೆ ತೊಂದರೆ ನಿವಾರಣೆ ಆಗುವವರಿಗೆ ಮಾತ್ರ ಮಾಡಬೇಕು. ಕನಿಷ್ಠ 25 ನಿಮಿಷಗಳು) ಮಧ್ಯದ ಬೆರಳು ಹೃದಯಕ್ಕೆ ಸಂಬಂಧಿಸಿದ ಆ ಕಾರಣಕ್ಕಾಗಿ ಇದು ಹೃದಯ ಸಮರ್ಥ ಕಾರ್ಯನಿರ್ವಹಣೆಗೂ ಸಹಾಯಕ. (ಜಪ ಮಾಡುವಾಗ ಮಧ್ಯದ ಬೆರಳಿನ ಮೇಲೆ ಮಣಿಗಳ ಒತ್ತಡ ಬಿದ್ದು ಮುದ್ರೆಯ ಪರಿಣಾಮ ಉಂಟಾಗಿ ಹೃದಯ ಬಲಗೊಳ್ಳುತ್ತದೆ) ಈ ಮುದ್ರೆಯಿಂದ ಮೂಳೆಗಳು ಬಲಗೊಳ್ಳುವುದು ಮತ್ತು ಮೂಳೆ ಮಜ್ಜೆ (bone marrow) ಯಿಂದಲೇ ರಕ್ತದ ಉತ್ಪತ್ತಿ ಆಗುವುದರಿಂದ ಆರೋಗ್ಯ ಬಳಗೊಳ್ಳುತ್ತದೆ. ಆಕಾಶ ತತ್ವದ ಕೊರತೆಯಿಂದ ನಮ್ಮ ದೇಹದ ಎಲುಬುಗಳು ಸತ್ವಹೀನವಾಗುತ್ತದೆ. ಮತ್ತು ದ್ವನಿ ತರಂಗಗಳು ಪ್ರತಿಪಲಿಸಲಾರವು. ಆದರಿಂದಾಗಿ ಕಿವಿಯ ಸಮಸ್ಯೆಗಳು ಕಿವಿ ನೋವು ಕಿವಿ ಸೋರುವುದು ಜೊತೆಗೆ ಕಿವುಡುತನ ಉಂಟಾಗುತ್ತದೆ ಈ ಮುದ್ರೆಯಿಂದ ಆಕಾಶ ತತ್ವ ಹೆಚ್ಚುತ್ತದೆ. ತನ್ಮೂಲಕ ಇದೆ ಎಲ್ಲಾ ದೋಷಗಳು ದೂರವಾಗುತ್ತದೆ.