ಮನೆ ರಾಜ್ಯ ಏಪ್ರಿಲ್‌ 9ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟ..!

ಏಪ್ರಿಲ್‌ 9ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟ..!

0

ಬೆಂಗಳೂರು : ಫೆಬ್ರವರಿ – ಮಾರ್ಚ್ ತಿಂಗಳಲ್ಲಿ ನಡೆದಿದ್ದ ದ್ವೀತಿಯ ಪಿಯುಸಿ ಪರೀಕ್ಷೆ-1 ಫಲಿತಾಂಶಕ್ಕೆ ಪರೀಕ್ಷಾ ಮಂಡಳಿ ಅಂತಿಮ ದಿನಾಂಕ ಪ್ರಕಟಿಸಿದೆ.ಏಪ್ರಿಲ್‌ 9 ರಂದು (ಗುರುವಾರ) ಬೆಳಗ್ಗೆ ಫಲಿತಾಂಶ ಪ್ರಕಟವಾಗಲಿದೆ.

ಇಂದು ಫಲಿತಾಂಶ ಪ್ರಕಟವಾಗಬೇಕಿತ್ತು‌‌‌ ಕಾರಣವೇ ಇಲ್ಲದೇ ಬೋರ್ಡ್ ಫಲಿತಾಂಶ ಪ್ರಕಟ ಮುಂದೂಡಿಕೆ ಮಾಡಿತ್ತು. ಈ ಬೆನ್ನಲ್ಲೇ ಫಲಿತಾಂಶ ಪ್ರಕಟಿಸಲು ಅಂತಿಮ ದಿನಾಂಕವನ್ನೂ ಬಿಡುಗಡೆ ಮಾಡಿದೆ.

ಏಪ್ರಿಲ್ 9ರ ಬೆಳಗ್ಗೆ ಸಚಿವರು ನಡೆಸುವ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನದ ನಂತ್ರ ಇಲಾಖೆ ವೆಬ್‌ಸೈಟ್‌ ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಅಂತ ಎಕ್ಸಾಂ ಬೋರ್ಡ್ ಮೂಲಗಳು ಮಾಹಿತಿ ನೀಡಿದೆ.