ಬೆಂಗಳೂರು: 2025ನೇ ಸಾಲಿನ ‘ದ್ವಿತೀಯ ಪಿಯುಸಿ ಪರೀಕ್ಷೆ-3’ ಇಂದು ಜೂನ್ 9ರಿಂದ ಜೂನ್ 20ರವರೆಗೆ ರಾಜ್ಯದಾದ್ಯಂತ ನಡೆಯಲಿದೆ. ಈ ಪರೀಕ್ಷೆಗಳಿಗಾಗಿ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಗೊಳಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೆಲವು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ನಕಲು, ಚೀಟಿ ಬರೆದು ಹಂಚುವುದು, ಅಥವಾ ಯಾವುದೇ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ.
ಮುಖ್ಯ ಅಧೀಕ್ಷಕರು ಮಾತ್ರ ಕ್ಯಾಮರಾ ಇಲ್ಲದ ಸಾಮಾನ್ಯ ಮೊಬೈಲ್ ಹೊಂದಿರಬಹುದು. ಇತರ ಎಲ್ಲ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊಂದುವುದು ನಿಷಿದ್ಧವಾಗಿದೆ.
ಪರೀಕ್ಷಾ ಕೇಂದ್ರದ ಒಳಗೆ ಅನಧಿಕೃತ ಪ್ರವೇಶ, ಚಿತ್ರೀಕರಣ, ಸ್ಫೋಟಕ ವಸ್ತುಗಳು, ಮಾರಕ ಆಯುಧಗಳು ಅಥವಾ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಧ್ಯಮದ ಬಳಕೆಗೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಮತ್ತು ಮುಗಿಯುವವರೆಗೆ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯೊಳಗಿನ ಜೆರಾಕ್ಸ್ ಅಂಗಡಿಗಳು ಕಾರ್ಯನಿರ್ವಹಿಸಬಾರದು. ಅಲ್ಲದೆ ಧ್ವನಿವರ್ಧಕಗಳ ಬಳಕೆಯೂ ನಿಷಿದ್ಧವಾಗಿದೆ.
ವಿದ್ಯಾರ್ಥಿಗಳಿಗೆ ಸೂಚನೆಗಳು
- ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯವಾಗಿ ಪರೀಕ್ಷೆಗೆ ತರಬೇಕು.
- ಪರಿಕ್ಷೆಯ ಅಂತಿಮ ಗಂಟೆ ಮೊದಲು ಹೊರ ಹೋಗಲು ಅವಕಾಶವಿಲ್ಲ. ಹೊರಡುವ ವಿದ್ಯಾರ್ಥಿಗಳಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆ ಕಡ್ಡಾಯವಾಗಿ ಪಡೆದುಕೊಳ್ಳಲಾಗುತ್ತದೆ.
- ಕೇವಲ ಸರಳ ಕ್ಯಾಲ್ಕುಲೇಟರ್ ಬಳಸಲು ಅನುಮತಿ ಇದೆ, ಆದರೆ ಸ್ಟ್ರಾಟಿಸ್ಟಿಕ್ಸ್ ವಿಷಯಕ್ಕೆ ಮಾತ್ರ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬಳಸಬಹುದು.
- ಮೊಬೈಲ್, ಸ್ಮಾರ್ಟ್ ವಾಚ್, ಬ್ಲೂಟೂತ್, ಇಯರ್ಫೋನ್ ಇತ್ಯಾದಿ ಬಳಕೆ ಸಂಪೂರ್ಣವಾಗಿ ನಿಷಿದ್ಧ.
ಪರೀಕ್ಷೆಗಳ ವೇಳಾಪಟ್ಟಿ ಹೀಗಿದೆ:
- ಜೂನ್ 9: ಕನ್ನಡ / ಅರೇಬಿಕ್
- ಜೂನ್ 10: ಇತಿಹಾಸ / ಭೌತಶಾಸ್ತ್ರ
- ಜೂನ್ 11: ರಾಜ್ಯಶಾಸ್ತ್ರ / ಸಂಖ್ಯಾಶಾಸ್ತ್ರ / ಜೀವಶಾಸ್ತ್ರ
- ಜೂನ್ 12: ರಸಾಯನಶಾಸ್ತ್ರ / ಅರ್ಥಶಾಸ್ತ್ರ
- ಜೂನ್ 13: ಇಂಗ್ಲಿಷ್
- ಜೂನ್ 14: ತರ್ಕಶಾಸ್ತ್ರ / ವ್ಯವಹಾರ ಅಧ್ಯಯನ / ಗಣಿತ / ಶಿಕ್ಷಣ ಶಾಸ್ತ್ರ / ಗೃಹ ವಿಜ್ಞಾನ
- ಜೂನ್ 15: ಭಾನುವಾರ ರಜೆ
- ಜೂನ್ 16: ಸಮಾಜಶಾಸ್ತ್ರ / ಭೂಗರ್ಭ ಶಾಸ್ತ್ರ / ವಿದ್ಯುನ್ಮಾನ ಶಾಸ್ತ್ರ / ಗಣಕ ವಿಜ್ಞಾನ
- ಜೂನ್ 17: ಐಚ್ಛಿಕ ಕನ್ನಡ / ಲೆಕ್ಕಶಾಸ್ತ್ರ
- ಜೂನ್ 18: ಹಿಂದಿ
- ಜೂನ್ 19: ಮನಃಶಾಸ್ತ್ರ / ಮೂಲ ಗಣಿತ / ಭೂಗೋಳ ಶಾಸ್ತ್ರ
- ಜೂನ್ 20: ತಮಿಳು / ತೆಲುಗು / ಮಲಯಾಳಂ / ಮರಾಠಿ / ಉರ್ದು / ಸಂಸ್ಕೃತ / ಫ್ರೆಂಚ್














