ಮೈಸೂರು: ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ಪಿ.ನಿಖಿತಾ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಜಾಹ್ನವಿ ಚೇತನ್ ಪಟೇಲ್ ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಎ.ಎಸ್.ಅನನ್ಯಾ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕುವೆAಪುನಗರದ ಬಿಜಿಎಸ್ ಬಾಲಕಿಯರ ಪಿಯು ಕಾಲೇಜಿನ ಪಿ.ನಿಖಿತಾ ಅವರು ವಾಣಿಜ್ಯ ವಿಭಾಗದಲ್ಲಿ ೫೯೫ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ೩ನೇ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ, ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ, ಅಕೌಂಟೆನ್ಸಿ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ತಲಾ ೧೦೦ ಅಂಕಗಳನ್ನು ಪಡೆದ ನಿಖಿತಾ, ಇಂಗ್ಲಿಷ್‌ನಲ್ಲಿ ೯೫ ಅಂಕ ಗಳಿಸಿದ್ದಾರೆ.
ನಿಖಿತಾ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡ ಗ್ರಾಮದ ಕೃಷಿಕರಾದ ಪರಮೇಶ್ ಮತ್ತು ಕಾತ್ಯಾಯಿನಿ ದಂಪತಿ ಪುತ್ರಿ. ಮಗಳ ಓದಿಗಾಗಿಯೇ ದಂಪತಿ ಕಳೆದ ೩ ವರ್ಷದ ಹಿಂದೆ ಟಿ.ಕೆ.ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿದ್ದಾರೆ. ಮೂವರೂ ಮಕ್ಕಳಿಗೂ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ಜಾಹ್ನವಿಗೆ ೪ನೇ ಸ್ಥಾನ: ಬಿಜಿಎಸ್ ಕಾಲೇಜಿನ ಜಾಹ್ನವಿ ಚೇತನ್ ಪಟೇಲ್ ವಿಜ್ಞಾನ ವಿಭಾಗದಲ್ಲಿ ೫೯೩ ಅಂಕಗಳಿಸಿದ್ದು, ಜಿಲ್ಲೆಗೆ ಮೊದಲ ಹಾಗೂ ರಾಜ್ಯಕ್ಕೆ ೪ನೇ ಸ್ಥಾನ ಪಡೆದಿದ್ದಾರೆ.
ಸಂಸ್ಕೃತ, ಭೌತಶಾಸ್ತ್ರದಲ್ಲಿ ತಲಾ ೧೦೦, ರಸಾಯನ ವಿಜ್ಞಾನ, ಗಣಿತದಲ್ಲಿ ತಲಾ ೯೯, ಜೀವವಿಜ್ಞಾನದಲ್ಲಿ ೯೮, ಇಂಗ್ಲಿಷ್‌ನಲ್ಲಿ ೯೭ ಅಂಕಗಳಿಸಿದ್ದಾರೆ. ಜಾಹ್ನವಿ ಮೂಲತಃ ಗುಜರಾತ್‌ನವರಾಗಿದ್ದು, ತಂದೆ ಚೇತನ್ ಬಿ. ಪಟೇಲ್ ಖಾಸಗಿ ಕಂಪನಿ ಉದ್ಯೋಗಿ. ತಾಯಿ ಮೋಹಿನಿ ಪಟೇಲ್ ಗೃಹಿಣಿ.
ಮರಿಮಲ್ಲಪ್ಪ ಪಿಯು ಕಾಲೇಜಿನ ಎ.ಎಸ್.ಅನನ್ಯಾ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ೫೮೮ ಅಂಕಗಳಿಸಿ ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ ೬ನೇ ಸ್ಥಾನ ಪಡೆದಿದ್ದಾರೆ. ನಂಜನಗೂಡಿನ ತಾಲ್ಲೂಕು ಆಲತ್ತೂರಿನ ಸತೀಶ್ ಕುಮಾರ್ ಮತ್ತು ರೂಪಶ್ರೀ ದಂಪತಿ ಪುತ್ರಿ.
ಕನ್ನಡ ೧೦೦, ಇಂಗ್ಲಿಷ್ ೯೫, ಇತಿಹಾಸ ೯೯, ಅರ್ಥಶಾಸ್ತ್ರ ೯೬, ಭೂಗೋಳ ವಿಜ್ಞಾನ ೧೦೦, ರಾಜ್ಯಶಾಸ್ತ್ರ ೯೮ ಅಂಕಗಳಿಸಿದ್ದಾರೆ.