ಮನೆ ರಾಷ್ಟ್ರೀಯ ಸಂಸತ್‌ ಭವನದಲ್ಲಿ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ…!

ಸಂಸತ್‌ ಭವನದಲ್ಲಿ ಭದ್ರತಾ ವೈಫಲ್ಯ – ಗೋಡೆ ಹಾರಿ ಆವರಣಕ್ಕೆ ಎಂಟ್ರಿ…!

0

ನವದೆಹಲಿ : ದೆಹಲಿಯಲ್ಲಿರುವ ಸಂಸತ್‌ ಭವನದಲ್ಲಿ ಮತ್ತೊಮ್ಮೆ ಭದ್ರತಾ ಉಲ್ಲಂಘನೆಯಾಗಿದ್ದು, ಇಂದು ವ್ಯಕ್ತಿಯೊಬ್ಬ ಮರವನ್ನು ಹತ್ತಿ ಗೋಡೆ ಏರುವ ಮೂಲಕ ಸಂಸತ್ತಿನ ಭವನದ ಆವರಣವನ್ನು ಪ್ರವೇಶಿಸಿರುವ ಘಟನೆ ನಡೆದಿದೆ.

ರೈಲ್ ಭವನದ ಕಡೆಯಿಂದ ಗೋಡೆ ಮೇಲೆ ಹಾರಿದ್ದ ವ್ಯಕ್ತಿ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್ ಅನ್ನು ತಲುಪಿ, ಒಳನುಗ್ಗಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಆತನನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನ ನೆನ್ನೆ (ಗುರುವಾರ) ಮುಕ್ತಾಯವಾಗಿತ್ತು. ಅಧಿವೇಶನ ಮುಕ್ತಾಯವಾದ ಒಂದು ದಿನದ ನಂತರ ಭದ್ರತಾ ಉಲ್ಲಂಘನೆಯಾಗಿದೆ. ಆಗಾಗ್ಗೆ ಅಡ್ಡಿಪಡಿಸುವಿಕೆಗಳೊಂದಿಗೆ ಮುಕ್ತಾಯಗೊಂಡ ಒಂದು ದಿನದ ನಂತರವೇ ಈ ಘಟನೆ ನಡೆದಿದೆ.