ಮನೆ ರಾಜಕೀಯ ಸಿಎಂ ವಿರುದ್ಧ ಸಿಆರ್ ​ಪಿಸಿ ಕಾಯ್ದೆಯಡಿ ತನಿಖೆ ಕುರಿತು ತಜ್ಞರ ಸಲಹೆ ಪಡೆಯುತ್ತೇವೆ: ಡಾ.ಜಿ.ಪರಮೇಶ್ವರ್

ಸಿಎಂ ವಿರುದ್ಧ ಸಿಆರ್ ​ಪಿಸಿ ಕಾಯ್ದೆಯಡಿ ತನಿಖೆ ಕುರಿತು ತಜ್ಞರ ಸಲಹೆ ಪಡೆಯುತ್ತೇವೆ: ಡಾ.ಜಿ.ಪರಮೇಶ್ವರ್

0

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಹಳೆ ಸಿಆರ್​ಪಿಸಿ ಕಾಯ್ದೆಯಡಿ ತನಿಖೆ ನಡೆಸಲು ಬುಧವಾರ ನಿರ್ದೇಶನ ನೀಡಿದೆ. ಆದರೆ, ಈಗ ಬಿಎನ್​​ಎಸ್​ಎಸ್ ಕಾಯ್ದೆ ಜಾರಿಗೆ ಬಂದಿದೆ. ಆ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Join Our Whatsapp Group

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಸಚಿವರು, ಮುಡಾ ತನಿಖೆ ಸಂಬಂಧ ಬುಧವಾರ ಜನಪ್ರತಿನಿಧಿಗಳ ಕೋರ್ಟ್ ಹಳೆಯ ಸಿಆರ್​​ಪಿಸಿ ಕಾಯ್ದೆಯಡಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ. ಆದರೆ ಸಿಆರ್​​ಪಿ ಕಾಯ್ದೆಗಳು ಈಗ ಅಸ್ತಿತ್ವದಲ್ಲಿಲ್ಲ. ಹಾಗಾಗಿ ಅದನ್ನು ಅನ್ವಯಿಸುವ ಹಾಗಿಲ್ಲ. 2024ರ ಜುಲೈ 1ರಿಂದ ಬಿಎನ್​​ಎಸ್​ಎಸ್ ಕಾಯ್ದೆ ಜಾರಿಗೆ ಬಂದಿದೆ. ಹೊಸ ಕಾಯ್ದೆಯಡಿ ತನಿಖೆಗೆ ನಿರ್ದೇಶನ ಕೊಡಬೇಕಿತ್ತು ಎಂಬ ಚರ್ಚೆ ನಡೆಯುತ್ತಿದೆ. ಕಾನೂನು ತಜ್ಞರು ಏನು ಹೇಳುತ್ತಾರೆ ನೋಡೋಣ ಎಂದರು.

ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಹೋಗಬಹುದು ಇಲ್ಲವೇ ಸುಪ್ರೀಂ ಕೋರ್ಟ್​ಗೆ ಹೋಗಬಹುದು. ನಮ್ಮ ಮುಂದೆ ಆಯ್ಕೆಗಳಿವೆ. ಪರಿಶೀಲಿಸಿ, ಕಾನೂನು ಸಲಹೆ ಪಡೆದು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.‌

ರಾಜ್ಯಪಾಲರು ಪದೇ ಪದೆ ವರದಿ ಕೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ. ಅವರು ಸಾಂವಿಧಾನಿಕ ವ್ಯಕ್ತಿ. ಸಿಎಂ ಸರ್ಕಾರದ ಎಕ್ಸಿಕ್ಯೂಟಿವ್ ಹೆಡ್. ಪ್ರತಿನಿತ್ಯ ಅವರಿಗೆ ರಿಪೋರ್ಟ್ ಕೊಡಬೇಕು ಅನ್ನೋದೇನಿಲ್ಲ. ಪ್ರಮುಖ ತೀರ್ಮಾನ ತೆಗೆದುಕೊಳ್ಳುವಾಗ ಅವರಿಗೆ ಮಾಹಿತಿ ಕೊಡ್ತೇವೆ. ಅವರು ಪ್ರತಿದಿನ ಕಾಗದ ಬರೆದರೆ ಕೊಡುವುದಕ್ಕೆ ಆಗಲ್ಲ ಎಂದು ಹೇಳಿದರು.

ಸಿಎಂ ರಾಜೀನಾಮೆಗೆ ಪ್ರತಿಪಕ್ಷಗಳ ಹೋರಾಟ ವಿಚಾರವಾಗಿ ಮಾತನಾಡಿ, ಪ್ರತಿಪಕ್ಷವಾಗಿ ಅವರು ಮಾಡ್ತಾರೆ. ನಾವು ಕಾನೂನಾತ್ಮಕವಾಗಿ ಏನು ಮಾಡಬೇಕೋ ಮಾಡ್ತೇವೆ. ಕಾನೂನು ಹೆಚ್ಚಾ, ಅವರ ಅಭಿಪ್ರಾಯ ಹೆಚ್ಚಾ?. ಬಿಜೆಪಿಯವರ ಅಭಿಪ್ರಾಯ ಹೆಚ್ಚಾಗಲ್ಲ. ನಾವು ಕಾನೂನಾತ್ಮಕವಾಗಿ ಪರಿಶೀಲನೆ ಮಾಡ್ತೇವೆ. ಈ ದೇಶದಲ್ಲಿ ಕಾನೂನು ಇಲ್ವಾ?. ಸಿದ್ದರಾಮಯ್ಯ ಕೆಳಗಿಳಿಸೋಕೆ ಅವರು ಆರೋಪಗಳನ್ನು ಮಾಡುತ್ತಿದ್ದಾರೆ. ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ. ನಾವು ಕಾನೂನಿಗೋಸ್ಕರ ಹೋರಾಡ್ತಿದ್ದೇವೆ ಎಂದರು.