ಮನೆ ಸುದ್ದಿ ಜಾಲ ಎಂಇಎಸ್ ಪುಂಡರ ಜೊತೆ ಸೆಲ್ಫಿ – ಮಾಳಮಾರುತಿ ಠಾಣೆ ಸಿಪಿಐ ಯಡವಟ್ಟು

ಎಂಇಎಸ್ ಪುಂಡರ ಜೊತೆ ಸೆಲ್ಫಿ – ಮಾಳಮಾರುತಿ ಠಾಣೆ ಸಿಪಿಐ ಯಡವಟ್ಟು

0

ಬೆಳಗಾವಿ : ಕನ್ನಡ ರಾಜ್ಯೋತ್ಸವದಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ಆಚರಿಸಲು ಬಂದಿದ್ದ ಎಂಇಎಸ್ ಪುಂಡರ ಜೊತೆ ಮಾಳ ಮಾರುತಿ ಠಾಣೆಯ ಸಿಪಿಐ ಜಾಕೀರ್ ಪಾಷಾ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಯಡವಟ್ಟು ಮಾಡಿಕೊಂಡಿದ್ದಾರೆ.

ಬೆಳಗಾವಿಯ ಸಂಭಾಜಿ ಉದ್ಯಾನವನದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಕರಾಳ ದಿನ ಆಚರಣೆಗಾಗಿ ನಾಡಡದ್ರೋಹಿ ಎಂಇಎಸ್ ಮುಖಂಡ ಶುಭಂ ಶೆಳಕೆ ಹಾಗೂ ಸಹಚರರು ಬಂದಿದ್ದರು. ಈ ವೇಳೆ ಅವರ ಜೊತೆ ಸಿಪಿಐ ಸೆಲ್ಫಿ ತಗೆದುಕೊಂಡಿದ್ದಾರೆ.

ಸಿಪಿಐ ನಡೆ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಸಿಪಿಐ ಧಕ್ಕೆ ತಂದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಈ ಹಿಂದೆ ಶುಭಂ ಸೆಳಕೆ ವಿರುಧ್ಧ ಭಾಷಾ ಸಾಮರಸ್ಯ ಕೆಡೆಸುವ ವಿವಾದಾತ್ಮಕ ಹೇಳಿಕೆ, ಶಾಂತಿ ಭಂಗ ಪಡಿಸಿದ ಹಿನ್ನೆಲೆ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರಾಳಾ ದಿನ ಆಚರಣೆಗೆ ಅನುಮತಿ ಇಲ್ಲ. ಆದರೂ ಲಿಲೇ ಮೈದಾನದಲ್ಲಿ ಕರಾಳ ದಿನ ಆಚರಿಸಲು ಎಂಇಎಸ್ ಪುಂಡರು ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ವಿರುಧ್ದ ಘೋಷಣೆ ಕುಗುತ್ತಿರುವದನ್ನು ಮೂಕ ಪ್ರೇಕ್ಷಕರಾಗಿ ನಿಂತು ಬೆಳಗಾವಿ ಪೊಲೀಸರು ನೋಡುತ್ತಿದ್ದಾರೆ ಎಂದು ಹೇಳಲಾಗಿದೆ.