ಮನೆ ರಾಜ್ಯ ಬಂಡೀಪುರ ಅಭಯಾರಣ್ಯದಲ್ಲಿ ಹರಡುತ್ತಿರುವ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ

ಬಂಡೀಪುರ ಅಭಯಾರಣ್ಯದಲ್ಲಿ ಹರಡುತ್ತಿರುವ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ

0

ಚಾಮರಾಜನಗರ: ರಾಜ್ಯದಲ್ಲೇ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಅಭಯಾರಣ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಲ್ಯಾಂಟನ ಬಳಿಕ ಸೆನ್ನಾ ಸೆಪ್ಟಾಬ್ಲಿಶ್ ಎಂಬ ಸಸ್ಯ ತಳಿ ಮುಳುವಾಗುತ್ತಿದೆ

ಕೇರಳದ ವಾಯ್ನಾಡ್​ ವನ್ಯಜೀವಿ ಅಭಯಾರಣ್ಯ ಹಾಗೂ ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾಯನವನಕ್ಕೆ ಹೊಂದಿಕೊಂಡಿರುವ ಬಂಡೀಪುರ ಅಭಯಾರಣ್ಯಕ್ಕೆ ಅತೀ ಹೆಚ್ಚು ಬಿದಿರು ಹಾಗೂ ಹುಲ್ಲುಗಾವಲು ಹೊಂದಿರುವ ಹೆಗ್ಗಳಿಕೆ ಇದೆ. ಆದರೆ ಕಳೆದ ಎರಡು ವರ್ಷದಲ್ಲಿ ಕಾಡಿನಾದ್ಯಂತ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ತಳಿ ಹರಡಿಕೊಳ್ಳುತ್ತಿದೆ.

ಈ ಸೆನ್ನಾ ಸೆಪ್ಟಾಬ್ಲಿಶ್ ಹುಟ್ಟಿದ ಸುತ್ತಾ ಮುತ್ತಾ ಬೇರೆ ಯಾವುದೇ ಸಸ್ಯವನ್ನು ಬೆಳೆಯಲು ಬಿಡುವುದಿಲ್ಲ. ಒಂದು ಗಿಡವನ್ನ ಕಿತ್ತು ಹಾಕಿದ್ರೆ, ಅದೇ ಜಾಗದಲ್ಲಿ ನಾಲ್ಕೈದು ಸಸ್ಯ ಹುಟ್ಟುತ್ತಿದೆ. ಇದು ಅರಣ್ಯಾಧಿಕಾರಿಗಳಿಗೆ ತಲೆನೋವನ್ನು ತಂದಿಟ್ಟಿದೆ.

ಈ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯವನ್ನು ಯಾವುದೇ ಪ್ರಾಣಿಗಳು ಸೇವಿಸುವುದಿಲ್ಲ. ಆದ್ದರಿಂದ ಇನ್ನು ಕಾಡಿನಾದ್ಯಂತ ಈ ಸಸ್ಯ ಬೆಳೆದರೆ, ಕಾಡು ಪ್ರಾಣಿಗಳಿಗೂ ಆಹಾರ ಕೊರತೆ ಎದುರಾಗುವ ಸಾದ್ಯತೆಯಿದೆ.

ಕಾಡಿಗೆ ಮಾರಕವಾಗಿರುವ ಸಸ್ಯವನ್ನ ಬುಡ ಸಮೇತ ಕಿತ್ತೆಸೆಯಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಅರಣ್ಯಾಧಿಕಾರಿಗಳು ಐದಾರು ಎಕರೆಯಲ್ಲಿ ಬೆಳೆದಿರುವ ಅಪಾಯಕಾರಿ ಸಸ್ಯವನ್ನು ನಾಶ ಪಡಿಸಿದ್ದಾರೆ. ಆದರೆ, ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ಥಳಿಯನ್ನು ಬಂಡೀಪುರ ಅಭಯಾರಣ್ಯದಿಂದ ಮುಕ್ತಿಗೊಳಿಸಲು ಬರೋಬ್ಬರಿ ಮೂರು ವರ್ಷ ಬೇಕಿದೆ ಎಂದು ಕನ್ಸರ್ ವೇಟರ್ ಫಾರೆಸ್ಟ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.