ಮೈಸೂರು: ಗಜಪಡೆ ಗೆಳೆಯರ ಬಳಗದ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸೆಪ್ಟಂಬರ್ 7 ರಿಂದ 10 ರವರೆಗೆ ಚಾಮುಂಡಿ ಬೆಟ್ಟದ ರಸ್ತೆ ಜೆ.ಸಿ ನಗರ 8ನೇ ಕ್ರಾಸ್ ನಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಲಾಗುತ್ತಿದೆ.
ಸೆ.7 ರಂದು ಶ್ರೀ ಸಿದ್ದಿ ವಿನಾಯಕನ ಪ್ರತಿಷ್ಟಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 10 ರಂದು ವಿಶೇಷ ಹೂವಿನ ಅಲಂಕಾರ ಹಾಗೂ ಗೌರಿ ಪೂಜೆಯನ್ನು ಏರ್ಪಡಿಸಲಾಗಿದೆ.
ಸೆ.12 ರಂದು ಅನ್ನ ಸಂತರ್ಪಣೆ ಮಾಡಲಾಗಿದ್ದು, ಸೆ.14 ರಂದು ಸಪ್ತಸ್ವರ ಮ್ಯೂಜಿಕ್ ಆರ್ಕೇಸ್ಟ್ರಾ ಹಾಗೂ ಎಸ್ ಎಸ್ ಎಲ್ ಸಿ & ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೆ. 15 ರಂದು ನಗರದ ಮುಖ್ಯರಸ್ತೆಯ ಮೂಲಕ ಶ್ರೀ ಸಿದ್ದಿ ವಿನಾಯಕನನ್ನು ವಿಜೃಂಭಣೆಯ ಮೂಲಕ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ.
Saval TV on YouTube