ಮೈಸೂರು: ಶ್ರೀರಾಂಪುರ 2ನೇ ಹಂತದಲ್ಲಿರುವ ಆರ್ ಎಲ್ ಹೆಚ್ ಪಿ ಸಂಸ್ಥೆ ಆಶಾಭವನ ಹೆಣ್ಣು ಮಕ್ಕಳ ತಂಗುದಾಣದಲ್ಲಿ ವಾಸವಿದ್ದ ಸೋನು (15) ಆಗಸ್ಟ್ 7ರ ಬೆಳಿಗ್ಗೆ ತಾನು ವ್ಯಾಸಂಗ ಮಾಡುತ್ತಿದ್ದ ಜೆಎಸ್ ಎಸ್ ಪ್ರೌಢಶಾಲೆಗೆ ಹೋಗದೆ ನಾಪತ್ತೆಯಾಗಿದ್ದಾಳೆ.
ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಹರೆ: 5 ಅಡಿ ಎತ್ತರ, ಕನ್ನಡ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಮೈಕಟ್ಟು, ಕಂದು ಮೈಬಣ‍್ಣ, ಕಪ್ಪು ತಲೆಗೂದಲು ಹೊಂದಿದ್ದು, ರಾಮಾಗ್ರೀನ್ ಬಣ್ಣದ ಚೂಡಿದಾರ್ ಹಾಕಿರುತ್ತಾರೆ.
ಬಾಲಕಿಯ ಮಾಹಿತಿ ದೊರೆತಲ್ಲಿ ದೂ. 0821-2418324, 9480802247 ನ್ನು ಸಂಪರ್ಕಿಸಬಹುದಾಗಿದೆ.
ಮಹಿಳೆ ನಾಪತ್ತೆ
ಕುವೆಂಪುನಗರ ಠಾಣಾ ವ್ಯಾಪ್ತಿಯ ನಿವಾಸಿ ಸುಮತಿ(50) ಆಗಸ್ಟ್ 6 ರಂದು ಮನೆಯಿಂದ ಹೋದವರು ಹಿಂತಿರುಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಹರೆ: 5.4 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕಪ್ಪು & ಬಿಳಿ ಮಿಶ್ರಿತ ಗುಂಗುರು ಕೂದಲು, ಕೆಂಪು ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕುತ್ತಿಗೆ ಬಲಭಾಗದಲ್ಲಿ ಕಪ್ಪು ಕಾರೆ ಹರಳು ಇರುತ್ತದೆ.
ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ದೂ. 0821-2418324, 9480802247 ನ್ನು ಸಂಪರ್ಕಿಸಲು ಕೋರಲಾಗಿದೆ.