ಮೈಸೂರು: ಮೊದಲನೇ ಪ್ರಕರಣದಲ್ಲಿ ವಿದ್ಯಾರಣ್ಯಾಪುರಂನ ನಿವಾಸಿ ಮಾನಸಿಕ ಅಸ್ವಸ್ಥರಾಗಿರುವ ಬಾಲಾಜಿರಾವ್ ಪವಾರ್(45) ನಾಪತ್ತೆಯಾಗಿದ್ದಾರೆ ಎಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: 5 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ತೆಳ್ಳನೆ ಶರೀರ, ಬಲಕೈ ಮೇಲೆ ಎಂ ರಾಜು ಎಂಬ ಹಚ್ಚೆ ಇದ್ದು, ಮನೆಯಿಂದ ಹೋಗುವಾಗ ಕ್ರೀಂ ಕಲರ್ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಎರಡನೇ ಪ್ರಕರಣ
ಮಾನಸಿಕ ಅಸ್ವಸ್ಥರಾದ ನಾಗರಾಜು.ಡಿ(68) ಎಂಬುವವರು ಮನೆ ಬಿಟ್ಟು ಹೋಗಿ ಆಗಾಗ ಹಿಂತಿರುಗುತ್ತಿದ್ದು, ನವೆಂಬರ್ 11 ರಂದು ಮನೆಯಿಂದ ಹೋದವರು ಹಿಂತಿರುಗದೇ ನಾಪತ್ತೆಯಾಗಿದ್ದಾರೆಂದು ಪ್ರಕರಣ ದಾಖಲಾಗಿದೆ.
ಚಹರೆ: 5.2 ಅಡಿ ಎತ್ತರ, ದುಂಡು ಮುಖ, ಸಣಕಲು ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ಸಣ್ಣ ಗೆರೆಯುಳ್ಳ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮೂರನೇ ಪ್ರಕರಣ
ಚಿನ್ನಶೆಟ್ಟಿ(80) ಎಂಬುವವರು 2022ರ ಫೆಬ್ರವರಿ 1 ರಂದು ಮನೆಯಿಂದ ಹೋದವರು ಹಿಂತಿರುಗದೇ ನಾಪತ್ತೆಯಾಗಿದ್ದಾರೆ.
ಚಹರೆ: 5.7 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಜುಬ್ಬ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ.
ಈ ಮೂವರು ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ. 0821- 2418339, 2418340 ಅಥವಾ ವಿದ್ಯಾರಣ್ಯಾಪುರಂ ಪೊಲೀಸ್ ಠಾಣೆ ದೂ. 9480802245, 0821-2418322 ನ್ನು ಸಂಪರ್ಕಿಸಲು ಕೋರಲಾಗಿದೆ.