ಮನೆ ಅಪರಾಧ ಸೇವಾ ನ್ಯೂನತೆ: ಧಾರವಾಡದ ವೈದ್ಯೆಗೆ 11.10 ಲಕ್ಷ ದಂಡ

ಸೇವಾ ನ್ಯೂನತೆ: ಧಾರವಾಡದ ವೈದ್ಯೆಗೆ 11.10 ಲಕ್ಷ ದಂಡ

0

ಧಾರವಾಡ: ವಾಸ್ತವಾಂಶವನ್ನು ಮರೆಮಾಚಿ ಅಂಗವಿಕಲ ಮಗುವಿನ ಜನನಕ್ಕೆ ಕಾರಣವಾದ ಇಲ್ಲಿನ ಮಾಳಮಡ್ಡಿಯ ಪ್ರಶಾಂತ ನರ್ಸಿಂಗ್ ಹೋಮ್‌’ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಮತ್ತು ಪರಿಹಾರವಾಗಿ ₹11.10ಲಕ್ಷ ವಿಧಿಸಿದೆ.

ಇಲ್ಲಿನ ಶ್ರೀನಗರ ಬಡಾವಣೆಯ ಭಾವಿಕಟ್ಟಿ ಪ್ಲಾಟ್ ನಿವಾಸಿ ಪರಶುರಾಮ ಘಾಟಗೆ ಎಂಬುವವರು ತಮ್ಮ ಪತ್ನಿ ಪ್ರೀತಿ ಅವರನ್ನು ಪ್ರಶಾಂತ ನರ್ಸಿಂಗ್ ಹೋಮ್‌’ನಲ್ಲಿ 2018ರ ಜುಲೈ 12ರಿಂದ 2019ರ ಜನೆವರಿವರೆಗೆ ತಪಾಸಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಐದು ಬಾರಿ ಸ್ಕ್ಯಾನ್‌ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ವೈದ್ಯೆ ಡಾ. ಸೌಭಾಗ್ಯ ಅವರು, ‘ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಅಂತಾ ತಿಳಿಸುತ್ತಿದ್ದರು. ದೂರುದಾರರ ಪತ್ನಿ ತನ್ನ 9ನೇ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹೆರಿಗೆ ನಂತರ ಅಂಗವಿಕಲ ಹೆಣ್ಣು ಮಗು ಜನಿಸಿತು’ ಎಂದು ದೂರಿನಲ್ಲಿ ಹೇಳಲಾಗಿದೆ.ಸು

ಪ್ರೀಂ ಕೋರ್ಟ್‌’ನ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18ರಿಂದ 20ವಾರಗಳ ಸ್ಕ್ಯಾನಿಂಗ್‌’ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿವೆಯೋ ಇಲ್ಲವೇ ಎಂಬುದು ತಪಾಸಣೆ ನಡೆಸಿದ ವೈದ್ಯರಿಗೆ ತಿಳಿಯಲಿದೆ. ಆದರೆ ಐದು ಬಾರಿ ಸ್ಕ್ಯಾನಿಂಗ್ ನಡೆಸಿದ ನಂತರ, ವಾಸ್ತವಾಂಶ ಗೊತ್ತಿದ್ದರೂ, ಪ್ರಸೂತಿ ತಜ್ಞೆ ಅದನ್ನು ಮುಚ್ಚಿಟ್ಟು ಸೇವಾ ನ್ಯೂನತೆ ಎಸಗಿದ್ದಾರೆ. ಈ ಕುರಿತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರ ಆಯೋಗವನ್ನು ಕೋರಿದ್ದರು.