ಮನೆ ಅಪರಾಧ ಲಂಚ ಪಡೆಯುವ ವೇಳೆ ಸವಣೂರು ಎಸಿ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಲಂಚ ಪಡೆಯುವ ವೇಳೆ ಸವಣೂರು ಎಸಿ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ

0

ಸವಣೂರು: ಎ.ಸಿ. ಕೋರ್ಟಿನಲ್ಲಿರುವ ಜಮೀನು ವ್ಯಾಜ್ಯದ ಆದೇಶ ಪ್ರತಿಯನ್ನು ನೀಡಲು 10 ಸಾವಿರ ಲಂಚ ಪಡೆಯುವಾಗ ಸವಣೂರು ಉಪವಿಭಾಗಾಧಿಕಾರಿ ಕಚೇರಿಯ ಕೇಸ್‌ ವರ್ಕರ್‌ ಕುಮಾರ ನೆಗಳೂರು ಎಂಬಾತ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ರೈತ ಗುಡ್ಡಪ್ಪ ನಿಂಗಪ್ಪ ದೊಡ್ಡಮನಿ ಅವರು ತಮ್ಮ ತಂದೆಯ ಹೆಸರಿನಲ್ಲಿರುವ 16 ಗುಂಟೆ ಜಮೀನಿನ ಮೇಲಿರುವ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ಎ.ಸಿ. ಕೋರ್ಟ್‌ ನಲ್ಲಿ 2021-22ರಲ್ಲಿ ದಾವೆ ಹೂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಕೋರ್ಟಿನ ಆದೇಶ ಪ್ರತಿಯನ್ನು ಪಡೆಯಲು ಮನವಿ ಮಾಡಿಕೊಂಡಿದ್ದರು. ಆದರೆ, ಕೇಸ್‌ ವರ್ಕರ್‌ ಕುಮಾರ ನೆಗಳೂರು ಕೋರ್ಟಿನ ಆದೇಶ ಪ್ರತಿ ನೀಡಲು ರೈತನಿಗೆ 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

 ಸೋಮವಾರ ಲಂಚ ಪಡೆಯುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ಕುಮಾರ ನೆಗಳೂರು ಎಂಬಾತನನ್ನು ಬಂಧಿಸಿದ್ದಾರೆ.

ಈ ಕುರಿತು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.