ಮನೆ ಕಾನೂನು ಅಪ್ರಾಪ್ತೆಯನ್ನು ವರಿಸಿದ ಕಂಡಕ್ಟರ್, ಮದುವೆ ಮಾಡಿಸಿದ್ದ 2 ಅರ್ಚಕರಿಗೆ ಕಠಿಣ ಶಿಕ್ಷೆ

ಅಪ್ರಾಪ್ತೆಯನ್ನು ವರಿಸಿದ ಕಂಡಕ್ಟರ್, ಮದುವೆ ಮಾಡಿಸಿದ್ದ 2 ಅರ್ಚಕರಿಗೆ ಕಠಿಣ ಶಿಕ್ಷೆ

0

ಚಾಮರಾಜನಗರ(Chamarajanagar): ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಬಲವಂತದಿಂದ ವಿವಾಹವಾಗಿದ್ದ ಬಸ್ ಕಂಡಕ್ಟರ್ ಹಾಗೂ ಮದುವೆ ಮಾಡಿಸಿದ್ದ ಇಬ್ಬರು ಅರ್ಚಕರಿಗೆ ಕಠಿಣ ಶಿಕ್ಷೆ ವಿಧಿಸಿ ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೆಎಸ್ಆರ್’ಟಿಸಿ ಕಂಡಕ್ಟರ್ ರವಿಕುಮಾರ್, ಅರ್ಚಕರಾದ ಕೆ ಎನ್ ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಶಿಕ್ಷೆಗೊಳಗಾದ ಅಪರಾಧಿಗಳು. ಕಾಲೇಜಿಗೆ ತೆರಳುತ್ತಿದ್ದ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಕಂಡಕ್ಟರ್, 2017 ರ ನವೆಂಬರ್ 23 ರಂದು ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಂಡು ಶ್ರೀರಂಗಪಟ್ಟಣದಲ್ಲಿ ವಿವಾಹ ಮಾಡಿಕೊಂಡಿದ್ದರು. ಈತನಿಗೆ ಇಬ್ಬರು ಅರ್ಚಕರು ಸಹಕಾರ ಕೊಟ್ಟು ವಿವಾಹ ಮಾಡಿಸಿದ್ದರು ಎನ್ನಲಾಗ್ತಿದೆ.

ವಿವಾಹವಾದ ಬಳಿಕ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ಮೊದಲನೇ ಆರೋಪಿ ರವಿಕುಮಾರ್’ಗೆ 3 ವರ್ಷ ಶಿಕ್ಷೆ, ಇದರಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ಅರ್ಚಕರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಧೀಶರಾದ ಎ ಸಿ ನಿಶಾರಾಣಿ ಈ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ ಯೋಗೇಶ್ ವಾದ ಮಂಡಿಸಿದ್ದರು.