ಮೈಸೂರು: ನಗರ ಬಸ್ ನಿಲ್ದಾಣದ ಒಳ ಬರುವವರನ್ನು ಚರಂಡಿ ನೀರಿನ ದುರ್ನಾತ ಸ್ವಾಗತಿಸುತ್ತಿದ್ದು, ಇದರಿಂದ ಪ್ರಯಾಣಿಕರು ಮುಗಿ ಮುಚ್ಚಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಗರದ ಹೃದಯ ಭಾಗವಾದ ಕೆ.ಆರ್. ಸರ್ಕಲ್ ನ ಪಕ್ಕದಲ್ಲಿರುವ ಸಿಟಿ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವ ಬಲಭಾಗದಲ್ಲಿ (ಗರುಡ ಮಾಲ್ ಎದುರುಗಡೆ) ಒಳಚರಂಡಿ ತೆರೆದು, ಕೊಳಚೆ ನೀರು ರಸ್ತೆಯ ತುಂಬೆಲ್ಲ ಹರಿಯುತ್ತಿದೆ.
ಇದರಿಂದಾಗಿ ಸಿಟಿ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ ಗಳು ಈ ಕೊಳಚೆ ನೀರಿನ ಮೇಲೆ ಪ್ರವೇಶ ಮಾಡಿ ನಿಲ್ದಾಣದ ಕಾಲು ಭಾಗ ದುರ್ನಾತ ಬೀರುತ್ತಿದೆ. ಪಾದಚಾರಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಡೆಯುವ ಪರಿಸ್ಥಿತಿ ತಲೆದೋರಿದ್ದು, ಕೆ.ಆರ್. ಸರ್ಕಲ್ ನಲ್ಲಿ ಸಿಗ್ನಲ್ ನಲ್ಲಿ ನಿಲ್ಲುವ ವಾಹನಗಳ ಸವಾರರಿಗೂ ಈ ಕೊಳಚೆಯ ವಾಸನೆ ಮೂಗಿಗೆ ಬಡಿಯುತ್ತಿದೆ.
ಸ್ವಚ್ಛ ನಗರಿ ಎಂಬ ಹೆಸರು ಪಡೆದಿರುವ ಮೈಸೂರಿನ ಹೃದಯ ಭಾಗದಲ್ಲಿ ಈ ರೀತಿ ಪರಿಸ್ಥಿರಿ ನಿರ್ಮಾಣಗೊಂಡಿದೆ. ಈ ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಅವ್ಯವಸ್ಥೆಯನ್ನು ಸರಿಪಡಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.














