ಮನೆ ಅಪರಾಧ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 10...

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ

0

ಬೆಳಗಾವಿ : 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪರಾಧಿಗೆ 20 ವರ್ಷ ಜೈಲು ಶಿಕ್ಷ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಳಗಾವಿಯ ಪೋಕ್ಸೋ ಕೋರ್ಟ್ ಜಡ್ಜ್ ಸಿಎಂ ಪುಷ್ಪಲತಾ ಆದೇಶ ಹೊರಡಿಸಿದ್ದಾರೆ.

ಅಪರಾಧಿ ನಿಸಾರ್ ಅಹ್ಮದ್ ಫಕ್ರು ಸಾಬ್ ಚಪ್ಗಾವಿಗೆ 20 ವರ್ಷ ಶಿಕ್ಷೆ ವಿಧಿಸಿ ಬೆಳಗಾವಿಯ ಪೋಕ್ಸೋ ಕೋರ್ಟ್ ಜಡ್ಜ್ ಸಿಎಂ ಪುಷ್ಪಲತಾ ಆದೇಶ ಹೊರಡಿಸಿದ್ದಾರೆ. ಕೃತ್ಯ ನಡೆದ ಒಂದೇ ವರ್ಷದಲ್ಲಿ ವಿಚಾರಣೆ ಮುಗಿಸಿ ಶಿಕ್ಷೆ ಪ್ರಕಟಿಸಿದ್ದಾರೆ. 4 ವರ್ಷದ ಬಾಲಕಿಗೆ ಆರೋಪಿ ಚಾಕೊಲೇಟ್ ಆಮಿಷ ಒಡ್ಡಿ ಕರೆದೊಯ್ದಿದ್ದ.

ಮನೆಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. 2024 ಫೆಬ್ರವರಿ 27 ರಂದು ನಂದಗಡ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ತನಿಖೆ ನಡೆಸಿ ಪೊಲೀಸರು ಎರಡು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಆರೋಪಿಗೆ ಜಡ್ಜ್ 20 ವರ್ಷ ಶಿಕ್ಷೆ ತಂಡ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.