ಮನೆ ಕಾನೂನು ಲೈಂಗಿಕ ದೌರ್ಜನ್ಯ ಪ್ರಕರಣ: ಮೇ 14ರವರೆಗೆ ಹೆಚ್ ​ಡಿ ರೇವಣ್ಣಗೆ ನ್ಯಾಯಾಂಗ ಬಂಧನ

ಲೈಂಗಿಕ ದೌರ್ಜನ್ಯ ಪ್ರಕರಣ: ಮೇ 14ರವರೆಗೆ ಹೆಚ್ ​ಡಿ ರೇವಣ್ಣಗೆ ನ್ಯಾಯಾಂಗ ಬಂಧನ

0

ಬೆಂಗಳೂರು : ಹೆಚ್​​ಡಿ ರೇವಣ್ಣ   ವಿರುದ್ಧದ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಮೇ.08) ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್​ ಆದೇಶಿಸಿದೆ.

Join Our Whatsapp Group

ಏಳು ದಿನದವರೆಗೆ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನಲೆ ರೇವಣ್ಣರನ್ನು ಎಸ್​ಐಟಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ.

ಪ್ರಕರಣ ಸಂಬಂಧ ಎಸ್ ​ಐಟಿ ಕಸ್ಟಡಿಯಲ್ಲಿರುವ ರೇವಣ್ಣ ಆಪ್ತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಭರದಿಂದ ಸಾಗಿದೆ. ಇನ್ನು ರೇವಣ್ಣ ಪರ ಜಾಮೀನಿಗೆ ಅವರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಸ್ಟಡಿಯಲ್ಲಿರೋ ವ್ಯಕ್ತಿಗೆ ಜಾಮೀನು ಕೊಡುವುದು ಹೇಗೆ ಎಂದು ನ್ಯಾಯಾಧೀಶರು ರೇವಣ್ಣ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮುಂದಿಟ್ಟಿದ್ದರ. ಆದರೂ ಈ ಬಗ್ಗೆ ಎಸ್‌ಐಟಿ ಪ್ರತಿಕ್ರಿಯಿಸಲಿ ಅಂತಾ ಎಸ್​ಐಟಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಅದರಂತೆ ಇಂದು ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.

ಇನ್ನು ಕೋರ್ಟ್ ಹಾಲ್ ​ನಲ್ಲಿಯೇ ರೇವಣ್ಣ ಇದ್ದು, ನ್ಯಾಯಾಲಯದ ಕಟ್ಟಡದಿಂದ ರೇವಣ್ಣ ಕಣ್ಣೀರು ಹಾಕುತ್ತಾ ಬಂದಿದ್ದಾರೆ.